'ಬೆನ್ನಿ ಬದ್ಕ್ ' ಕೆಸರು ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮ
ಮಹಿಳಾ ಮೋರ್ಚಾದ ವತಿಯಿಂದ ಇತ್ತೀಚಿಗೆ ಬಳ್ಕುಂಜೆ ಕೋಟ್ನಯಗುತ್ತು ದಿವಾಕರ್ ಪೂಂಜಾರವರ ಗದ್ದೆಯಲ್ಲಿ ‘ ಬೆನ್ನಿ ಬದ್ಕ್’ ಕೆಸರು ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ
ಶ್ಯಾಮ್ ಪ್ರಸಾದ್ ಮುಖರ್ಜಿಯವರ 125 ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪರ್ಚನೆ ನಡೆಸಿ ದೇಶಕ್ಕಾಗಿ ಬಲಿದಾನಗೈದ ಅವರ ತ್ಯಾಗದ ಸ್ಮರಣೆ ಮಾಡಲಾಯಿತು. ಮಂಡಲ ಮಹಿಳಾ ಮೋರ್ಚಾ ದ ಅಧ್ಯಕ್ಷೆ ಗೀತಾ ಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಹಿಳಾ ಮೋರ್ಚಾದ ಸದಸ್ಯರುಗಳು ಉತ್ಸಾಹದಿಂದ ಗದ್ದೆಯಲ್ಲಿ ನಾಟಿ ಕೆಲಸವನ್ನು ಮಾಡಿದರು . ಮಹಿಳಾ ಮೋರ್ಚಾದ ಮಂಡಲ ಪ್ರಭಾರಿ ಮಮತಾ ಪೂಂಜಾ ಹಾಗೂ ಹಳೆಯಂಗಡಿಯ ಮಹಿಳಾ ಮೋರ್ಚಾದ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರದಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಸಂದ್ಯಾ ವೆಂಕಟೇಶ್ , ವಜ್ರಕ್ಷಿ ಶೆಟ್ಟಿ , ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ಸುಧಾ ಸುರೇಶ್, ಮಂಡಲದ ಹಾಗೂ ಮೋರ್ಚಾಗಳ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು .