ಬಜಪೆ:ಬೀಸಿದ ಭಾರೀ ಗಾಳಿ,ಅಡಿಕೆ ಮರಗಳಿಗೆ ಹಾನಿ
ಬಜಪೆ: ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಗೆ ಪಡುಪೆರಾರ ಗ್ರಾಮಪಂಚಾಯತ್ ವ್ಯಾಪ್ತಿಯ ಕೆಲವೆಡೆ ಅಡಿಕೆ ತೋಟಗಳಿಗೆ ಭಾರೀ ಹಾನಿಯಾಗಿದೆ.ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬೆತ್ತಿಗುತ್ತು,ಕತ್ತಲ್ ಸಾರ್ ಹಾಗೂ ಇನ್ನಿತರ ಕಡೆಗಳಲ್ಲಿ ರಾತ್ರಿ ಬೀಸಿದ ಬಲವಾದ ಗಾಳಿಗೆ ಅಡಿಕೆ ಮರಗಳು ಮುರಿದು ಬಿದ್ದಿದೆ.ಅಡಿಕೆ ಮರಗಳು ಮುರಿದು ಬಿದ್ದಿದರಿಂದ ಭಾರೀ ಹಾನಿ ಸಂಭವಿಸಿದೆ ಎಂದು ಮೋಹನ್ ಪೂಜಾರಿ ಕಬೆತ್ತಿಗುತ್ತು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.