ಬಸ್ ಹಾಗೂ ಬುಲೆಟ್ ಬೈಕ್ ಡಿಕ್ಕಿ,ಸವಾರ ದಾರುಣ ಸಾವು,ಎಕ್ಕಾರಿನಲ್ಲಿ ಘಟನೆ
ಬಜಪೆ :ಖಾಸಗಿ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ , ಹಿಂಬದಿ ಸವಾರೆ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಎಕ್ಕಾರಿನ ಕಟೀಲು ದ್ವಾರದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಘಟನೆಯಲ್ಲಿ ಮಹಮ್ಮದ್ ಬಶೀರ್ (55) ಸಾವನ್ನಪ್ಪಿದವರು. ಅವರ ಪತ್ನಿ ಸುಮಯ್ಯ (38) ಗಂಭೀರವಾಗಿ ಗಾಯಗೊಂಡವರು.
ಕಿನ್ನಿಗೋಳಿ ಕಡೆಯಿಂದ ಬಜಪೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸವಾರ ಬಶೀರ್ ಅವರ ತಲೆ ಹಾಗೂ ಮೈಮೇಲೆ ಗಂಭೀರವಾಗಿ ಗಾಯಗೊಂಡಿದ್ದು,ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಅವರ ಪತ್ನಿ ಸುಮಯ್ಯ ಗಂಭೀರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಸ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದೆ.
ಬಜಪೆ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.