ಎಕ್ಕಾರು:ವಿಜಯ ಯುವ ಸಂಗಮದ ಅಧ್ಯಕ್ಷರಾಗಿ ಧನಂಜಯ ರೈ ಎಕ್ಕಾರು ಆಯ್ಕೆ
ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪ್ರವೀಣ್. ಕೆ. ಎಂ ಅಧ್ಯಕ್ಷತೆಯಲ್ಲಿ ಎಕ್ಕಾರು ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ಪ್ರಾಂಗಣದಲ್ಲಿ ಜೂ. 21 ರ ಆದಿತ್ಯವಾರ ನಡೆಯಿತು.ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮನೀಶ್ ಶೆಟ್ಟಿ ಎಕ್ಕಾರು ವಾರ್ಷಿಕ ಕಾರ್ಯಕ್ರಮಗಳ ವರದಿ ಹಾಗು ಲೆಕ್ಕ ಪತ್ರ ಮಂಡಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ರತ್ನಾಕರ್ ಶೆಟ್ಟಿ ಬಡಕರೆ ಬಾಳಿಕೆ ಸಂಘದ ಕಾರ್ಯ ಚಟುವಟಿಗೆಗಳ ಬಗ್ಗೆ ಶ್ಲಾಘನೇ ವ್ಯಕ್ತಪಡಿಸಿ, ಮುಂದಿನ 30ನೇ ವರ್ಷದ ಕಾರ್ಯಕ್ರಮಗಳು ಕೂಡ ಜಗದೆಲ್ಲೆಡೆ ಸಂಸ್ಥೆಯ ಕಂಪು ಬೀರಲಿ ಎಂದು ಆಶಿಸಿದರು.
ಈ ಸಂದರ್ಭ ಸಭೆಯಲ್ಲಿ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.30 ನೇ ವರ್ಷದ ನೂತನ ಅಧ್ಯಕ್ಷರಾಗಿ ಧನಂಜಯ ರೈ ಎಕ್ಕಾರು ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ, ಕೋಶಾಧಿಕಾರಿಯಾಗಿ ರಂಜಿತ್ ಶೆಟ್ಟಿ,ಗೌರವ ಅಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ಬಡಕರೆ ಬಾಳಿಕೆ, ಗೌರವ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ
ಜೊತೆ ಕಾರ್ಯದರ್ಶಿ ಯಾಗಿ ದೀಕ್ಷಿತ್ ಶೆಟ್ಟಿ ಸಿತ್ಲ,
ಉಪಾಧ್ಯಕ್ಷರಾಗಿ ಭರತೇಶ್ ಶೆಟ್ಟಿ,
ದೀಕ್ಷಿತ್ ಮಾಡ ಎಕ್ಕಾರು, ಕೋಶಾಧಿಕಾರಿಯಾಗಿ ರಂಜಿತ್ ಶೆಟ್ಟಿ,ಜೊತೆ ಕೋಶಾಧಿಕಾರಿಯಾಗಿ ಅಧಿತ್ಯ ಶೆಟ್ಟಿ ಮಾಡರ ಮನೆ, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಂದ್ರ ಪ್ರಸಾದ್ ಎಕ್ಕಾರು, ವಿಕ್ರಂ ಮಾಡ ಎಕ್ಕಾರು, ಕ್ರೀಡಾ ಕಾರ್ಯದರ್ಶಿ ಯಾಗಿ ಪ್ರಶಾಂತ್ ಮಾಡ ಕ್ರೀಡಾ ನಾಯಕರಾಗಿ ವಿನೋದ್ ಶೆಟ್ಟಿ,ಉಪ ನಾಯಕರಾಗಿ ನವೀನ್ ಕುಮಾರ್, ಸಾಮಾಜಿಕ ಜಾಲತಾಣ ನಿರ್ವಹಣಕಾರಿಯಾಗಿ ಮನೀಶ್ ಶೆಟ್ಟಿ ಎಕ್ಕಾರು ,
ಧಾರ್ಮಿಕ ಕಾರ್ಯದರ್ಶಿ ಯಾಗಿ ಸತೀಶ್ ಶೆಟ್ಟಿ ಎಕ್ಕಾರು, ಮಧುಸೂದನ್ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ್ ಶೆಟ್ಟಿ, ಆದರ್ಶ್ ಶೆಟ್ಟಿ, ಚೇತನ್ ಕೆ.ಎಂ, ಆದಿತ್ಯ ಶೆಟ್ಟಿ ಮುರ, ಉದಯ್ ಶೆಟ್ಟಿ, ಪ್ರವೀಣ್ ಕೆ ಎಂ, ಹರಿಶ್ಚಂದ್ರ ಶೆಟ್ಟಿ, ದುರ್ಗೇಶ್ ಬಿ. ಮನೋಹರ್ ಶೆಟ್ಟಿ ಬೋಲೋಡಿ , ರಿತೇಶ್ ಶೆಟ್ಟಿಬಾಕ್ಯರಕೋಡಿ ,ಮಂಜುನಾಥ್ ಆಚಾರ್ಯ, ವಿಜಯ್ ಮಾಡ ಆಯ್ಕೆಯಾದರು.