ಎಕ್ಕಾರು:ಲೋಕಕಲ್ಯಾಣಾರ್ಥ ಹಾಗು ಎಕ್ಕಾರು ಗ್ರಾಮಸ್ಥರ ಸುಭೀಕ್ಷೆಗಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಿಯಾಳಾಭಿಷೇಕ
ಬಜಪೆ:ಲೋಕಕಲ್ಯಾಣಾರ್ಥ ಹಾಗು ಎಕ್ಕಾರು ಗ್ರಾಮಸ್ಥರ ಸುಭೀಕ್ಷೆಗಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ಸಿಯಾಳಾಭಿಷೇಕಕ್ಕೆ ಆದಿತ್ಯವಾರದಂದು ಎಕ್ಕಾರಿನಿಂದ ಕಟೀಲು ದೇವಳದ ತನಕ ಪಾದಯಾತ್ರೆಯ ಮೂಲಕ ಸಿಯಾಳ ಸಮರ್ಪಣೆಯು ನಡೆಯಿತು. ಆಪ್ರಯುಕ್ತ ಆದಿತ್ಯವಾರದಂದು ಗ್ರಾಮಸ್ಥರಿಂದ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿ ಪ್ರಾರ್ಥನೆ ನಡೆಯಿತು. ಬಳಿಕ ಪಾದಯಾತ್ರೆಯ ಮೂಲಕ ಕಟೀಲು ತನಕ ಸಾಗಿ ಸಿಯಾಳವನ್ನು ಶ್ರೀದೇವಿಗೆ ಸಮರ್ಪಿಸಲಾಯಿತು.ಸೋಮವಾರ ಬೆಳಿಗ್ಗೆ ಶ್ರೀ ದೇವಿಗೆ ಸಿಯಾಳಾಭಿಷೇಕವು ನಡೆಯಲಿದೆ.
ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವರು),ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸಂತೋಷ್ ಶೆಟ್ಟಿ ಮಿತ್ತೊಟ್ಟು ಬಾಳಿಕೆ,ಮುರ ಸದಾಶಿವ ಶೆಟ್ಟಿ,ಪ್ರಕಾಶ್ ಕುಕ್ಯಾನ್ ,ಸುದೀಪ್ ಅರ್ ಅಮೀನ್ ,ಸತೀಶ್ ಶೆಟ್ಟಿ ಎಕ್ಕಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.