Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ,ವಿಶ್ವ ಪರಿಸರ ದಿನಾಚರಣೆ - 2026

ಕಟೀಲು:ವನ ಸಿರಿ ಇಕೋ ಕ್ಲಬ್ ವತಿಯಿಂದ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು  ಇಲ್ಲಿ ವಿಶ್ವ ಪರಿಸರ ದಿನಾಚರಣೆ  - 2026  ನ್ನು  ಶುಕ್ರವಾರ ಆಚರಿಸಲಾಯಿತು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ  ಇಂದಿರಾ ಎನ್ ರಾವ್ ಮಾತನಾಡಿ ಪ್ರಕೃತಿಯು ನಮ್ಮನ್ನು ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಪ್ರೇರೇಪಿಸುತ್ತದೆ. ಮರಗಳ  ಸಂರಕ್ಷಣೆ ,ನೈಸರ್ಗಿಕ ಸಂಪನ್ಮೂಲಗಳ  ಉಳಿಸುವಿಕೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ನಾವು ಆರೋಗ್ಯಕರ ಹವಾಮಾನ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತೇವೆ. ಸುಸ್ಥಿರ ಭವಿಷ್ಯಕ್ಕಾಗಿ ಜವಾಬ್ದಾರಿಯುತ ರಾಷ್ಟ್ರವನ್ನು ಕಟ್ಟಲು ನಾವು ಎಲ್ಲರೂ ಕೈಜೋಡಿಸೋಣ ಎಂದರು.



ಕಳೆದ ಬಾರಿ ವಿಶ್ವ ಪರಿಸರ ದಿನಾಚರಣೆಗೆ ನೆಡಲಾಗಿದ್ದ  ರೆಂಜೆ ಸಸಿಯ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ , ಹತ್ತನೇ ತರಗತಿಯ ವಿದ್ಯಾರ್ಥಿಗಳು ಚಾರ್ಟ್ ನಲ್ಲಿ  ರಚಿಸಿದ ಶುಭಾಶಯ ಪತ್ರ ಹಾಗೂ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಗಿಡಕ್ಕೆ ಒಂದು ಪತ್ರ ವನ್ನು ಬರೆದು ಅದಕ್ಕೆ ಶುಭಾಶಯ ತಿಳಿಸಿದರು.  ಕೆಲ ವಿದ್ಯಾರ್ಥಿಗಳಿಗೆ ಸಣ್ಣ ಚಟುವಟಿಕೆಯನ್ನು ನೀಡಲಾಗಿತ್ತು.ರೆಂಜೆ ಗಿಡದ ಹುಟ್ಟುಹಬ್ಬಕ್ಕೆ 8ನೇ ತರಗತಿಯ ವಿದ್ಯಾರ್ಥಿಗಳು ಹಲವು ಸಣ್ಣ ಗಿಡಗಳನ್ನು ಉಡುಗೊರೆಯಾಗಿ ನೀಡಿದರು. ರೆಂಜೆ ಗಿಡವನ್ನು ನೆಟ್ಟು ಪೋಷಿಸಿದ ಎರಡು ವಿದ್ಯಾರ್ಥಿಗಳಾದ ಭವಿಷ್ ಮತ್ತು ರಿಮಿತ್ ಗೆ ಗಿಡಗಳನ್ನು ಉಡುಗೊರೆಯಾಗಿ ನೀಡಲಾಯಿತು. ಗಿಡಗಳನ್ನು  ಶಾಲೆಯ  ಆವರಣದಲ್ಲಿ  ನೆಟ್ಟು ಪೋಷಿಸಲು ತೀರ್ಮಾನಿಸಲಾಯಿತು.
ಭಾರತ ಸರಕಾರದ ಪರಿಸರ ಮಂತ್ರಾಲಯದ ನಿರ್ದೇಶನದಂತೆ "ಏಕ್ ಪೇಡ್ ಮಾ ಕೆ ನಾಮ್"  ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಯ ತಾಯಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಾಂಕೇತಿಕವಾಗಿ ಶಾಲೆಯ ಆವರಣದಲ್ಲಿ ಒಂದು ಗಿಡವನ್ನು ನೀಡಲಾಯಿತು. 

 ಕೃತಜ್ಞತಾ ಪತ್ರವನ್ನು ಕುಮಾರಿ ಸಾನ್ವಿಕಾ ಎಸ್ ಶೆಟ್ಟಿ ವಾಚಿಸಿದರು

 ರೆಂಜೆ  ಗಿಡದ ಪ್ರಥಮ ಹುಟ್ಟು ಹಬ್ಬದ ಅಂಗವಾಗಿ ಹಿರಿಯ ವಿದ್ಯಾರ್ಥಿ ಜಗನ್ನಾಥ್ ರವರ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು
ಗಣಿತ ಶಿಕ್ಷಕಿ ರಮ್ಯಾ ಕೆ ಕಾರ್ಯಕ್ರಮ ನಿರೂಪಿಸಿದರು ಇಕೋ ಕ್ಲಬ್ ಸಂಚಾಲಕಿ ಶ್ರೀಮತಿ ವಿನ್ನಿ ನಿರ್ಮಲ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು.




"ರಂಜೆ (ಬಕುಳ) ಮರ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮೂಲದ ಸಸ್ಯವಾಗಿದ್ದು, ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ.  ಪುರಾಣಗಳು ಹಾಗೂ ಪ್ರಾಚೀನ ಸಾಹಿತ್ಯಗಳಲ್ಲಿ ಕಾಳಿದಾಸನ ಅಭಿಜ್ಞಾನ ಶಾಕುಂತಲ ಹಾಗೂ ಮೇಘದೂತ ಕೃತಿಗಳಲ್ಲಿ ಬಕುಳದ ಅಥವಾ ರೆಂಜೆ ಗಿಡದ ಸೌಂದರ್ಯ ಮತ್ತು ಸುವಾಸನೆಯ ವರ್ಣನೆ ಇದೆ. ಇದರ ಔಷಧೀಯ ಗುಣಗಳನ್ನು ಆಯುರ್ವೇದ ಗ್ರಂಥಗಳಲ್ಲಿ ವಿವರಿಸಲಾಗಿದ್ದು ಹಲ್ಲು ನೋವು, ದೇಹದ ವಿಷಕಾರಿ ಅಂಶಗಳ ನಿವಾರಣೆ. ಉಸಿರಾಟದ ತೊಂದರೆ, ಚರ್ಮ ಸಂಬಂಧಿತ ರೋಗಗಳಿಗೆ ಇದರ ಹೂವು ಹಣ್ಣು ಬೇರು ತೊಗಟೆಗಳನ್ನು ಬಳಸಲಾಗುತ್ತದೆ. ಸುಗಂಧಭರಿತ ಹೂವುಗಳು ಮತ್ತು ದಟ್ಟ ಹಸಿರು ಎಲೆಗಳಿಂದಾಗಿ ಇಂದು ಅನೇಕ ದೇಶಗಳಲ್ಲಿ ಅಲಂಕಾರಿಕ ಹಾಗೂ ನೆರಳು ನೀಡುವ ಮರವಾಗಿ ಬೆಳೆಸಲಾಗುತ್ತಿದೆ 


-ಅಪ್ಸಾನ ಬಾನು 
10ನೇ ತರಗತಿಯ ವಿದ್ಯಾರ್ಥಿ ಅಪ್ಸಾನ ಬಾನು