ಯುವವಾಹಿನಿ (ರಿ) ಕುಪ್ಪೆಪದವು- ಎಡಪದವು ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ ಮತ್ತು ಗಿಡ ನೆಡುವ ಕಾರ್ಯಕ್ರಮ
ಕೈಕಂಬ : ಯುವವಾಹಿನಿ (ರಿ) ಕುಪ್ಪೆಪದವು- ಎಡಪದವು ಘಟಕದ ವತಿಯಿಂದ ಕಲ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಮತ್ತು ಶಾಲಾ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ ಆದಿತ್ಯವಾರ ನಡೆಯಿತು. ಯುವವಾಹಿನಿ ಕುಪ್ಪೆಪದವು-ಎಡಪದವು ಘಟಕದ ಅಧ್ಯಕ್ಷ ಶ್ರೀಧರ ಪೂಜಾರಿ, ಕಾರ್ಯದರ್ಶಿ ಶ್ರೀಮತಿ, ಅಕ್ಷತಾ,ಯುವವಾಹಿನಿ ರಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಆಕ್ಷಿತ್ ಕುಮಾರ್,ಘಟಕದ ಮಾಜಿ ಅಧ್ಯಕ್ಷರುಗಳಾದ ಅಜಯ್ ಅಮೀನ್, ಸೌಮ್ಯ ಕೋಟ್ಯಾನ್, ಜಗದೀಶ್ ದುರ್ಗಾಕೊಡಿ, ಘಟಕದ ಸದಸ್ಯೆ, ಮುತ್ತೂರು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷೆ ಸುಷ್ಮಾ, ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸದಾಶಿವ ಕಟ್ಟೆಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಿವ್ಯಾ, ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಉದಯ ಕುಮಾರ್, ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಶಾಲೆಯ ಹಿತೈಷಿಗಳು ಇದ್ದರು.