Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಂಆರ್‌ಪಿಎಲ್ ಸಂಸ್ಥೆಯಿಂದ ರೂ 15 ಲಕ್ಷ ಅನುದಾನದಲ್ಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಶಿಲಾನ್ಯಾಸ

ಕೈಕಂಬ :  ತೆಂಕ ಎಡಪದವು ಗ್ರಾಮದ ಶತಮಾನೋತ್ಸವದ ಸನಿಹದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣ್ಣೋರಿಯಲ್ಲಿ ಈ ವರ್ಷ ವಿಶೇಷವಾಗಿ LKG ಹಾಗೂ UKG ತರಗತಿಗಳನ್ನು ಆರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ  ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಎಂಆರ್‌ಪಿಎಲ್ ಸಂಸ್ಥೆಯಿಂದ ರೂ 15 ಲಕ್ಷ ಅನುದಾನ ಮಂಜೂರಾಗಿದ್ದು, ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿದರು. ಈಗಾಗಲೇ ಶಾಸಕರ ವಿಶೇಷ ಪ್ರಯತ್ನದ ಮೂಲಕ ನೂತನ ಕಟ್ಟಡವೊಂದು ಮಂಜೂರಾತಿಯಾಗಿದ್ದು, ಇದೀಗ ಮತ್ತೊಂದು ಕಟ್ಟಡ ನಿರ್ಮಾಣವಾಗಲಿದೆ.

ಕಾರ್ಯಕ್ರಮದಲ್ಲಿ  ಮಾಜಿ  ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ಬಿಆರ್‌ಪಿ ಸವಿತಾ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಎ., ಸಹ ಶಿಕ್ಷಕಿ ವಸಂತ ಶ್ರೀ, ಶಿಕ್ಷಕಿ ಸುಭಾಷಿಣಿ ಹಾಗೂ ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು,
ಗ್ರಾ.ಪಂ ನ ಮಾಜಿ  ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯರಾದ ಕುಶಾಲ್ ಕುಮಾರ್, ಗಣೇಶ್ ಕುಮಾರ್, ಜ್ಯೋತಿ ಶೆಟ್ಟಿ, ವಿಜಯಾ, ರುಕ್ಮಯ ನಾಯಕ್, ಗುಣಪಾಲ ನಾಯಕ್ , ಗೀತಾ ನಾಯಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲೋಕೇಶ್ ಹಾಗೂ ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವ ಶಾಲಾಭಿವೃದ್ಧಿ ಸಮಿತಿಯ ಇಕ್ಬಾಲ್, ಜಯಂತಿ, ಸೌಮ್ಯ, ಹೂವಯ್ಯ ಬಂಗೇರ, ತಾರಾನಾಥ್ ಪೂಜಾರಿ, ಶಿವಯ್ಯ ಮೇಸ್ತ್ರಿ, ಹೊನ್ನಯ ಗೌಡ, ವೆಂಕಟೇಶ್ ಭಟ್, ನವೀನ್ ನಾಯಕ್, ಧರ್ಣಪ್ಪ ಮೇಸ್ತ್ರಿ ಸೇರಿದಂತೆ ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.