Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿಗೆ ಪ್ರಾರ್ಥಿಸಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ


ಹಳೆಯಂಗಡಿ : ಜಗತ್ತಿನಲ್ಲಿಯೇ  ದೀರ್ಘಾವಧಿ ಆಡಳಿತ ನಡೆಸುತ್ತಿರುವ ದೇಶದ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಜಿಯವರ ದೀರ್ಘಾಯುಷ್ಯ ಮತ್ತು 2047 ರ ವಿಕಸಿತ ಭಾರತದ ಸಂಕಲ್ಪ ಸಾಧನೆ ಯ ಯಶಸ್ಸಿಗೆ ಪ್ರಾರ್ಥಿಸಿ ಭಾರತೀಯ ಜನತಾ ಪಾರ್ಟಿ ಹಳೆಯಂಗಡಿ ಮಹಾಶಕ್ತಿ ಕೇಂದ್ರದ ವತಿಯಿಂದ ಬುಧವಾರದಂದು ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ  ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ  ಟಿ . ಕೆ ಮಧುಸೂದನ ಆಚಾರ್ಯ, ಭಾ. ಜ. ಪ. ದ.ಕ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಶೋಭೆಂದ್ರ  ಸಸಿಹಿತ್ಲು,ಹಳೆಯಂಗಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ   ಲಕ್ಷ್ಮಣ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ಅಂಗರಗುಡ್ಡೆ, ಪಡುಪಣಂಬೂರು ಗ್ರಾ. ಪಂ  ಮಾಜಿ ಉಪಾಧ್ಯಕ್ಷ  ಹೇಮಂತ  ಅಮೀನ್, ಪಂಚಾಯತ್ ಮಾಜಿ ಸದಸ್ಯ  ಮೋಹನ್ ದಾಸ್,  ಸಂತೋಷ್ ಕುಮಾರ್, ಮಂಡಲ ಸದಸ್ಯ   ಲೋಹಿತ್ ಕೋಟ್ಯಾನ್, ದ. ಕ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್, ಬೆಳ್ಳಾಯರು, 125 ನೇ ಬೂತ್ ಅಧ್ಯಕ್ಷ  ದಿವೇಶ ದೇವಾಡಿಗ, 126 ಬೂತ್ ಅಧ್ಯಕ್ಷ  ವಿನೋದ್ ಸುವರ್ಣ, ತೋಕೂರು  ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪುರುಷೋತ್ತಮ ಕೋಟ್ಯಾನ್  ಹಾಗೂ  ಕಾರ್ಯಕರ್ತರು ಉಪಸ್ಥಿತರಿದ್ದರು.