ಕುಳಾಯಿ: ವಾರ್ಡ್ 9ರ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ
ಸುರತ್ಕಲ್ :ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ ಕುಳಾಯಿ ವಾರ್ಡ್ ನಂಬರ್ 9ರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ. 55 ಲಕ್ಷ ಅನುದಾನ ಮಂಜೂರಾಗಿದ್ದು ಇದರ ಉದ್ಘಾಟನೆಯನ್ನು ಶಾಸಕ ಡಾ. ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ವಿದ್ಯಾನಗರ ಮುಖ್ಯ ರಸ್ತೆಯಿಂದ ಬರ್ಕೆ ಹೋಗುವ ಮುಖ್ಯ ರಸ್ತೆ ಹಾಗೂ ಒಳ ರಸ್ತೆ ಡಾಮರೀಕರಣಕ್ಕೆ ರೂ. 25 ಲಕ್ಷ ಮತ್ತು ಬರ್ಕೆ ಒಳ ಚರಂಡಿ ದುರಸ್ತಿ ಹಾಗೂ ಕಾಂಕ್ರೀಟೀಕರಣಕ್ಕೆ ರೂ. 30 ಲಕ್ಷ ಸೇರಿ ಒಟ್ಟು ರೂ. 55 ಲಕ್ಷ ಮೀಸಲಿಟ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಈ ಅಭಿವೃದ್ಧಿ ಕಾಮಗಾರಿಗಳಿಂದ ಕುಳಾಯಿ ವಾರ್ಡ್ 9ರ ಬರ್ಕೆ ಪರಿಸರದ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.