Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸುರತ್ಕಲ್: ಗೋವಿಂದ ದಾಸ ಕಾಲೇಜ್ ಹಿಂಬದಿ ರಸ್ತೆ ಅಭಿವೃದ್ಧಿಗೆ ರೂ. 2 ಕೋಟಿ ಅನುದಾನ

ಸುರತ್ಕಲ್:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹೊಸಬೆಟ್ಟು 8ನೇ ವಾರ್ಡಿನ ಗೋವಿಂದ ದಾಸ ಕಾಲೇಜ್ ಹಿಂಬದಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ  ವಿಶೇಷ ಅನುದಾನದಿಂದ ರೂ. 2 ಕೋಟಿ ಒದಗಿಸಿದ್ದಾರೆ.
ಕಾಮಗಾರಿಯಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾಮಗಾರಿ ನಡೆಯುವಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟ ಗೋವಿಂದ ದಾಸ ಕಾಲೇಜ್ ಹಾಗೂ ವಿದ್ಯಾದಾಯಿನೀ ಶಾಲಾ ಆಡಳಿತ ಮಂಡಳಿಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

ಕಾಮಗಾರಿಗೆ ಅನುದಾನ ಒದಗಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ಸಹಕರಿಸಿದ ನಿಕಟಪೂರ್ವ ಮನಪಾ ಸದಸ್ಯ ವರುಣ್ ಚೌಟ ಅವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುದ್ದಲಿ ಪೂಜೆ ಸಂಧರ್ಭದಲ್ಲಿ 
ಮಾಜಿ ಮನಪ ಸದಸ್ಯರು, ಸ್ಥಳೀಯ ಪಕ್ಷದ ಪ್ರಮುಖರು, ಹಿರಿಯರು ಉಪಸ್ಥಿತರಿದ್ದರು.