ಮುಲ್ಕಿ:ಶಿಮಂತೂರು ದೇವಳ ಲೋಕಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ
ಮುಲ್ಕಿ: ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಜೂನ್ 15 ರ ಸೋಮವಾರ ಬೆಳಗ್ಗೆ ಶ್ರೀ ಆದಿಜನಾರ್ದನ ದೇವರಿಗೆ ಸೀಯಾಳಾಭಿಷೇಕ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭ ವಿಷ್ಣುಮೂರ್ತಿ ಭಟ್ ಪರೆಂಕಿಲ, ಮಾಜೀ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರೀಶ್ ಶೆಟ್ಟಿ, ಭರತ್ ದೇವಾಡಿಗ,ಕಿಶೋರ್ ಶೆಟ್ಟಿ ಪರೆಂಕಿಲ, ಪ್ರಬಂಧಕ ಜಯ ದೇವಾಡಿಗ,ಕಿಶೋರ್ ಶೆಟ್ಟಿ ಶಿಮಂತೂರು ಮತ್ತಿತರರು ಉಪಸ್ಥಿತರಿದ್ದರು
ಕ್ಷೇತ್ರದಲ್ಲಿ ಸಂಕ್ರಮಣ ಪ್ರಯುಕ್ತ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು