Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಹಳೆಯಂಗಡಿ  : ಬಿಲ್ಲವರ ಹಿತವರ್ಧಕ ಸಂಘ (ರಿ) ಸಸಿಹಿತ್ಲು ಸಂಚಾಲಕತ್ವದ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಸಭಾಂಗಣದಲ್ಲಿ ಕಾಂತಾಬಾರೆ ಬುದಾಬಾರೆ   ವಿದ್ಯಾನಿಧಿ ಸಹಯೋಗದೊಂದಿಗೆ ಜೂ.7 ರ  ಭಾನುವಾರದಂದು  ಸಸಿಹಿತ್ಲು ಗ್ರಾಮದ ಎಸ್.ಎಸ್.ಎಲ್. ಸಿ, ಪಿಯುಸಿ, ಡಿಗ್ರಿ, ಡಿಪ್ಲೊಮಾ, ಇಂಜಿನಿಯರಿಂಗ್ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ,ಅಶಕ್ತರಿಗೆ ಆರೋಗ್ಯ ನಿಧಿ ವಿತರಣೆ ಕಾರ್ಯಕ್ರಮ  ನಡೆಯಿತು.
ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಕೋಶಾಧಿಕಾರಿ ಮಂಜೋಡಿ ದೇವು ಪೂಜಾರಿ ಯಾನೆ ಎಸ್. ದಯಾನಂದ ಗುರಿಕಾರೆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ , ಉದ್ಯಮಿ ಜಯಂತಿ ಬಾಬು ಬಂಗೇರ, ವಿಶ್ವನಾಥ್ ಕೋಟ್ಯಾನ್, ಕ್ಷೇತ್ರದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕಾಂತುಲಕಣ ಯಾನೆ ಪಠೇಲರ ಮನೆತನದ ಲೀಲಾಧರ ಬಂಗೇರ, ನಿರಂಜನ್ ಬಂಗೇರ, ರಮೇಶ್ ಸನಿಲ್, ಕ್ಷೇತ್ರದ ಅರ್ಚಕರಾದ ಸುರೇಶ್ ಪೂಜಾರಿ, ದಾಮೋದರ ಪೂಜಾರಿ,ಕಡಪುರ ಮನೆತನದ ಹೇಮಚಂದ್ರ, ಗಂಗಾಧರ ಎ. ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ದಯಾನಂದ್, ಲೀಲಾ ವಸಂತ್ ಉಪಸ್ಥಿತರಿದ್ದರು. 
ಕುಮಾರಿ ತೃಪ್ತಿ ಮತ್ತು ಋತಿಕಾ ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಹರೀಶ್ ಪೂಜಾರಿ ವಂದಿಸಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಪ್ರಭಾತ್ ಕಾರ್ಯಕ್ರಮ ನಿರೂಪಿಸಿದರು



ಆರೋಗ್ಯ ನಿಧಿ ಉದ್ಘಾಟನೆ: 

 ಗುತ್ತಿಗೆತೋಟ ರಾಜು  ಇವರಿಗೆ 10,000 ರೂ. ಆರೋಗ್ಯ ನಿಧಿ ವಿತರಣೆ

 ದಾನಿಗಳಾದ ಜಯಂತಿ ಬಾಬು ಬಂಗೇರ,
ವಿಶ್ವನಾಥ ಕೋಟ್ಯಾನ್, ಪೂಜಾ ಅರೇಂಜರ್ಸ್‌ನ ಜೈಕೃಷ್ಣ ಕೋಟ್ಯಾನ್ ಇವರಿಗೆ ಗೌರವ ಸನ್ಮಾನ 

ಸಸಿಹಿತ್ಲು ಗ್ರಾಮದ 25 ಪ್ರತಿಭಾವಂತ ವಿದ್ಯಾರ್ಥಿಗಳು ಸನ್ಮಾನ ಸ್ವೀಕಾರ