ಸಸಿಹಿತ್ಲು ಅಗ್ಗಿದಕಳಿಯದಲ್ಲಿ ವಿದ್ಯಾರ್ಥಿವೇತನ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿವರಿಗೆ ವೈದ್ಯಕೀಯ ನೆರವು ಕಾರ್ಯಕ್ರಮ
ಹಳೆಯಂಗಡಿ : ಸಸಿಹಿತ್ಲು ಅಗ್ಗಿ ದಕಳಿಯ ಕರಾವಳಿ ಫ್ರೆಂಡ್ಸ್,ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ವತಿಯಿಂದ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮ
ವಿದ್ಯಾರ್ಥಿವೇತನ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿವರಿಗೆ ವೈದ್ಯಕೀಯ ನೆರವು ಹಾಗೂ ಉದ್ಯಮಿ ವೇದ್‌ಪ್ರಕಾಶ್ ಶ್ರೀಯಾನ್ ಪ್ರಾಯೋಜಕತ್ವದಲ್ಲಿ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವು ಭಾನುವಾರ ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅಧ್ಯಕ್ಷ ವಾಮನ್ ಇಡ್ಯಾ ಮಾತನಾಡಿಸಾಮಾಜಿಕ ಚಟುವಟಿಕೆಗಳ ಮೂಲಕ ಸಂಘಸಂಸ್ಥೆಗಳು ಗುರುತಿಸುವಂತಾಗಬೇಕು, ಕರಾವಳಿ ಫ್ರೆಂಡ್ಸ್ ಕಳೆದ ಹಲವಾರು ವರ್ಷಗಳಿಂದ ಸಮಾಜದ ವಿವಿಧ ಮಗ್ಗಲುಗಳಲ್ಲಿ ಸಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಸಸಿಹಿತ್ಲು ಅಗ್ಗಿದಕಳಿಯದ
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್.,ಸಸಿಹಿತ್ಲು ಸಾರಂತಾಯ ಗರೋಡಿಯ ಜಗನ್ನಾಥ ಕೋಟ್ಯಾನ್ , ಕದಿಕೆ ಮೊಗವೀರ ಮಹಾಸಭಾದ ಕಿಶೋರ್ ಗುರಿಕಾರ್ ,ಕದಿಕೆ ಮೊಗವೀರ ಮಹಾಸಭಾದ ಅಧ್ಯಕ್ಷ ಗಿರೀಶ್ ಶ್ರೀಯಾನ್ ,ಉದ್ಯಮಿ ಪ್ರದೀಪ್ ಜಿ. ಪೂಜಾರಿ, ಲಚ್ಚಿಲ್ ಮೊಗವೀರ ಸಭಾದ ಅಧ್ಯಕ್ಷ ತಿಲಕ್ ಕರ್ಕೇರ, ಅಗ್ಗಿದಕಳಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಧನ್‌ರಾಜ್ ಕೋಟ್ಯಾನ್, ಗೌರವಾಧ್ಯಕ್ಷ ಉದಯ ಬಿ ಸುವರ್ಣ,ಕರಾವಳಿ ಫ್ರೆಂಡ್ಸ್ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಸಂಸ್ಥೆಯ ಅಧ್ಯಕ್ಷರುಗಳಾದ ತಾರಾನಾಥ ಕರ್ಕೇರಾ,ಸೂರ್ಯ ಕಾಂಚನ್, ಬ್ರಹ್ಮ ಶ್ರೀ ನಾರಾಯಣಗುರು ಮಹಿಳಾ ಸಂಘದ ಸರೋಜಿನಿ, ಮುಖೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧಕ ವಿದ್ಯರ್ಥಿಗಳಿಗೆ ಸನ್ಮಾನ, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಡಾ.ಪ್ರಕೃತಿ ಪ್ರದೀಪ್ ಪೂಜಾರಿಯವರನ್ನು ಗೌರವಿಸಲಾಯಿತು ಉದ್ಯಮಿ ವೇದಪ್ರಕಾಶ್ ಶ್ರೀಯಾನ್ ವತಿಯಿಂದ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಣೆ, ವೈದ್ಯಕೀಯ ಚಿಕಿತ್ಸೆಗೆ ನೆರವು, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.