Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಡಿ.20:ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ - 2026,ಪಾವಂಜೆಯಲ್ಲಿ ಪೂರ್ವಬಾವಿ ಸಭೆ

ಪಾವಂಜೆ : ಉಡುಪಿಯಲ್ಲಿ 20 ಡಿಸೆಂಬರ್  2026 ರ ಆದಿತ್ಯವಾರದಂದು   ದೇವಾಡಿಗ ಮಹಾಧಿವೇಶನ  2026   ನಡೆಯಲಿದ್ದು,ಈ ಬಗ್ಗೆ   ಪೂರ್ವಬಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆಯಲ್ಲಿ ನಡೆಯಿತು. ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ  ಧರ್ಮಪಾಲ್ ಯು. ಸಭೆಯ ಅಧ್ಯಕ್ಷತೆ ವಹಿಸಿ ಅಧಿವೇಶನದ ಅಗತ್ಯತೆ ಇದರಿಂದ ಆಗುವ ಪ್ರಯೋಜನವನ್ನು ಸಭೆಯಲ್ಲಿ ವಿವರಿಸ  ಎಲ್ಲರ ಸಹಕಾರವನ್ನು ಯಾಚಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಂಬೈ ಸಂಘದ ಅಧ್ಯಕ್ಷ  ರವಿ ಎಸ್. ದೇವಾಡಿಗ ಮಾತನಾಡಿ  ಹಣ ಬಲ ಒಂದಿದ್ದರೆ ಸಾಲದು ಜನ ಬಲ ಮುಖ್ಯವಾಗಿ ಬೇಕಾಗಿದೆ. ಇದನ್ನು ನಿಮ್ಮಲ್ಲಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. 
ಸಂಘಟನಾ ಕಾರ್ಯದರ್ಶಿ  ಜನಾರ್ದನ ಪಡುಪಣಂಬೂರು ಮಾತನಾಡಿ  ಸಂಘಟನೆ ದೃಢವಾಗಿ ಕೆಲಸ ಮಾಡಲು ವಿವಿಧ ಉಪ ಸಮಿತಿಗಳನ್ನು ಮಾಡಬೇಕಾದ ಅಗತ್ಯತೆಯ ಬಗ್ಗೆ ತಿಳಿಸಿದರು. ಉಡುಪಿ ನಗರ ಸಭೆ ಮಾಜಿ ಸದಸ್ಯ ವಿಜಯ ಕೊಡವೂರು ಮಾತನಾಡಿ  ಗ್ರಾಮ ಸಭೆಗಳನ್ನು ರಚಿಸಿ ತಳಮಟ್ಟದಿಂದಲೇ ಪುಷ್ಟಿಕರಿಸುವ ಬಗ್ಗೆ ವಿವರಿಸಿದರು.

ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ  ಗಣೇಶ್ ದೇವಾಡಿಗ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 


 ಪಾವಂಜೆ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ  ವಿಜಯಲಕ್ಷ್ಮಿ ಜನಾರ್ದನ್, ಯುವ ವೇದಿಕೆ ಅಧ್ಯಕ್ಷ ಗಣೇಶ ದೇವಾಡಿಗ, ಪಾವಂಜೆ ಸಂಘದ ಅಧ್ಯಕ್ಷ  ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಉಡುಪಿ ಸಂಘದ ಅಧ್ಯಕ್ಷ  ರತ್ನಾಕರ್ ಜಿ ಎಸ್., ಮಂಗಳೂರು ಸಂಘದ ಅಧ್ಯಕ್ಷ  ಅಶೋಕ್ ಮೊಯಿಲಿ, ಉಡುಪಿ, ಉದ್ಯಾವರ, ಕಟಪಾಡಿ, ಕಾಪು, ಉಚ್ಚಿಲ, ಪಡುಬಿದ್ರೆ, ಎರ್ಮಾಳು, ಎಲ್ಲೂರು, ಬಂಟಕಲ್ಲು, ಪಲಿಮಾರು, ಬೆಳ್ಮಣ್ , ಹೆಜಮಾಡಿ, ಮೂಲ್ಕಿ, ಪಾವಂಜೆ ಸಂಘಗಳ ಅಧ್ಯಕ್ಷರು  ಪದಾಧಿಕಾರಿಗಳು ಭಾಗವಹಿಸಿದರು.
 ವಿವಿಧ  ಸಂಘಗಳ ಅಧ್ಯಕ್ಷರುಗಳು ತಮ್ಮ ತಮ್ಮ ಅನಿಸಿಕೆಗಳನ್ನು ಮಂಡಿಸಿದರು. 
 ಮಹಿಳಾ ವೇದಿಕೆ ಉಪಾಧ್ಯಕ್ಷೆ  ಜಯಶ್ರೀ ಯಾದವ್ ಪ್ರಾರ್ಥಿಸಿದರು. ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷ  ಯಾದವ ದೇವಾಡಿಗ ಸ್ವಾಗತಿಸಿದರು. ಪಾವಂಜೆ ಸಂಘದ ಉಪಾಧ್ಯಕ್ಷ ಸತೀಶ್ ಇಂದಿರಾನಗರ ಧನ್ಯವಾದವಿತ್ತರು. ಸಂಘದ ನಿಕಟಪೂರ್ವ ಅಧ್ಯಕ್ಷ  ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.