Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಾರ್ವಜನಿಕ ಶಿಕ್ಷಣ ಇಲಾಖೆ, ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ ಮಂಗಳೂರು ಉತ್ತರ ವಲಯದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಕಿನ್ನಿಗೋಳಿ : ಸಾರ್ವಜನಿಕ ಶಿಕ್ಷಣ ಇಲಾಖೆ,  ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ  ಮಂಗಳೂರು ಉತ್ತರ ವಲಯದ  ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಸೋಮವಾರ   ಪಂಜ ಶಾಲಾ ವಠಾರದಲ್ಲಿ ನಡೆಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ  ನವೀನ್ ಸಾಲಿಯನ್ ಪಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ಈ ಸಂದರ್ಭ  ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಸತೀಶ್ ಎಂ ಶೆಟ್ಟಿ ಬೈಲಗುತ್ತು, ಚಂದ್ರಹಾಸ ಶೆಟ್ಟಿ ಮೊಗಪಾಡಿ, ರಾಜೇಶ್ ಶೆಟ್ಟಿ ಮಜಲಗುತ್ತು  ಮಾಜಿ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ ಪಂಜ, ನವೀನ ಶೆಟ್ಟಿ  ನಲ್ಯಗುತ್ತು, ಸತೀಶ್ .ಜೆ.  ಶೆಟ್ಟಿಪಂಜದ ಗುತ್ತು,ಸುಂದರ ಪೂಜಾರಿ ಉಲ್ಯ , ನವಜ್ಯೋತಿ ಮಹಿಳಾ ಮಂಡಲದ   ಅಧ್ಯಕ್ಷೆ  ಮಮತಾ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ತಾರಾ ಶೆಟ್ಟಿ  ಉಪಸ್ಥಿತರಿದ್ದರು. ವರ್ಷಂಪ್ರತಿಯಂತೆ ಶಾಲಾ ಮಕ್ಕಳಿಗೆ ಬರವಣಿಗೆ ಪುಸ್ತಕಗಳನ್ನು  ಸೀತಾರಾಮ. ಎಲ್ .ಶೆಟ್ಟಿ ಮುಂಬೈಯವರು  ನೀಡಿದರು . ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ.ಸ್ವಾಗತಿಸಿದರು.  ಶಿಕ್ಷಕಿ ಕವಿತಾ ವಂದಿಸಿದರು.  ಶಿಕ್ಷಕಿ ಪಲ್ಲವಿ ಕಾರ್ಯಕ್ರಮ  ನಿರೂಪಿಸಿದರು.