ಕೆಮ್ರಾಲ್:ರೋಗ ಮುಕ್ತ ಸಮಾಜಕ್ಕೆ ಗ್ರಾಮಸ್ಥರ ಸಹಭಾಗಿತ್ವ ಮುಖ್ಯ- ಮಯ್ಯದಿ
ಮುಲ್ಕಿ: ಕೆಮ್ರಾಲ್ ಅತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತುಕೆಮ್ರಾಲ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ " ಟಿಬಿ ಮುಕ್ತ ಭಾರತ್ " ಅಭಿಯಾನ ದಡಿಯಲ್ಲಿ " ಉಚಿತ ಕ್ಷ - ಕಿರಣ ತಪಾಸಣಾ ಶಿಬಿರ " ಕೆಮ್ರಾಲ್ ಪಂಚಾಯತ್ ಸುಮುದಾಯ ಭವನದಲ್ಲಿ ನಡೆಯಿತು.
ಪಂಚಾಯತ್
ಮಾಜೀ ಅಧ್ಯಕ್ಷ ಮಯ್ಯದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರೋಗ ಮುಕ್ತ ಸಮಾಜಕ್ಕೆ ಗ್ರಾಮಸ್ಥರ ಸಹಭಾಗಿತ್ವ ಮುಖ್ಯವಾಗಿದ್ದು ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಿಂದ ಎಚ್ಚರವಿರಿ ಎಂದರು
ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ,. ಪಂಚಾಯತ್ ಕಾರ್ಯದರ್ಶಿ ಕೇಶವ, ಚಿಕಿತ್ಸಾ ಮೇಲ್ವಿಚಾರಕ ಮುರುಳಿಧರ ಸ. ಆ. ಅಧಿಕಾರಿ, ಗಣೇಶ್ ಪ್ರಾ. ಆ. ಸುರಕ್ಷಾಧಿಕಾರಿ,ಮಾರ್ಗರೆಟ್ ಸುಧರ್ಶಿನಿ, ಎಕ್ಸರೇ ಟೆಕ್ನಿಷಿಯನ್ ರೇಷ್ಮಾ ನಿವೇದಿತಾ ಮತ್ತು ಸುಜಾತ, ಮುಲ್ಕಿ ಮತ್ತು ಮೂಡಬಿದ್ರೆ ಆಸ್ಪತ್ರೆ ಮತ್ತು ಆಶಾ ಕಾರ್ಯಕರ್ತರು ವೀಣಾ, ವಿದ್ಯಾ, ಪ್ರಮೀಳಾ, ಶೋಭಾ, ಅಮಿತಾ ಉಪಸ್ಥಿತರಿದ್ದರು.
ಸುಮಾರು 66 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು