ಪಕ್ಷಿಕೆರೆ:ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ
ಪಕ್ಷಿಕೆರೆ:ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ನೇತೃತ್ವದಲ್ಲಿ ಮೇರಾ ಯುವ ಭಾರತ್, ದಕ್ಷಿಣ ಕನ್ನಡ, ಕೆಮ್ರಾಲ್ ಗ್ರಾಮ ಪಂಚಾಯತ್, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಒಡಿಯೂರು, ಎಲಿಯನ್ಸ್ ಕ್ಲಬ್ ಕಿನ್ನಿಗೋಳಿ , ಚಾಮರ ಫೌಂಡೇಶನ್ (ರಿ ), ಫ್ರೆಂಡ್ಸ್ ಕ್ಲಬ್(ರಿ ) ಕಾಪಿಕಾಡು, ನಾಗಬ್ರಹ್ಮ ಭಜನಾ ಮಂಡಳಿ ಹೊಸಕಾಡು, ಯುವ ಕೇಸರಿ ಕೊಯಿಕುಡೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ( ರಿ ) ಪಕ್ಷಿಕೆರೆ , ರಿಕ್ಷಾ ಚಾಲಕರ ಮಾಲಕರ ಸಂಘ ಪಕ್ಷಿಕೆರೆ ಮತ್ತು ಚರ್ಚ್ ನಿಲ್ದಾಣ ಹಾಗೂ ಶ್ರೀ ವಿನಾಯಕ ಮಹಿಳಾ ಮಂಡಳಿ ಸಹಯೋಗದಲ್ಲಿ ಜೂ.28 ರಂದು ರಕ್ತದಾನ ಶಿಬಿರವು ಕೆಮ್ರಾಲ್ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಗಳೂರು ವಲಯದ ಯೋಜನಾ ನಿರ್ದೇಶಕ ಕಿರಣ್ ಉರ್ವ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು
ಕೆಮ್ರಾಲ್ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ವಹಿಸಿದ್ದರು. ವೆನ್ಲಾಕ್ ಬ್ಲಡ್ ಬ್ಯಾಂಕ್ ಮಂಗಳೂರು ಮುಖ್ಯಸ್ಥ ಡಾ. ಅಶೋಕ್ ಮತ್ತು ಡಾ. ದೀಪಿಕಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ರಕ್ತದಾನದ ಕುರಿತು ಮಾಹಿತಿ ನೀಡಿದರು,
ಕಿನ್ನಿಗೋಳಿ ಎಲಿಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಆಚಾರ್ಯ, ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾಮಂದಿರದ ಸಂಚಾಲಕ ರಾಜೇಶ್ ಹೊಸಕಾಡು, ಯುವಕೇಸರಿ ಕೊಯಿಕುಡೆಯ ಉಪಾಧ್ಯಕ್ಷ ಜೀವನ್ , ಪಕ್ಷಿಕೆರೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಜಗದೀಶ್, ಪಕ್ಷಿಕೆರೆ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅನ್ಸಿಲಾ ಪತ್ರವೋ, ಕೆಮ್ರಾಲ್, ಪಕ್ಷಿಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಆಚಾರ್ಯ, ಶ್ರೀ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಧನರಾಜ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಶೆಟ್ಟಿಗಾರ್, ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪಾರ್ವತಿ, ಜಂಟಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು .
63 ರಕ್ತದಾನಿಗಳು ರಕ್ತದಾನ ಮಾಡಿದರು. 76 ನೇ ಸಲ ರಕ್ತದಾನ ಮಾಡಿದ ಯತೀಶ್ ಶೆಟ್ಟಿ ಕಟೀಲು ಇವರನ್ನು ಜಂಟಿ ಸಂಘ ಸಂಸ್ಥೆಗಳ ಪರವಾಗಿ ಗೌರವಿಸಲಾಯಿತು.
ಮಂಡಳಿಯ ಗೌರವ್ಯಾಧ್ಯಕ್ಷರಾದ ಧನಂಜಯ್ ಪಿ ಶೆಟ್ಟಿಗಾರ್ ಸ್ವಾಗತಿಸಿದರ, ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಡಿ ಶೆಟ್ಟಿಗಾರ್ ಧನ್ಯವಾದಗೈದರು. ಶ್ರೀಮತಿ ಗೀತಾ ಮನೋಜ್ ನಿರೂಪಿಸಿದರು.