Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಕ್ಷಿಕೆರೆ:ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಹಾಗೂ ಸ್ವಚ್ಚತಾ ಕಾರ್ಯ

ಪಕ್ಷಿಕೆರೆ:ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮಂಗಳೂರು, ಮೈ ಭಾರತ್ ದ. ಕ, ಕೆಮ್ರಾಲ್ ಗ್ರಾಮ ಪಂಚಾಯತ್,ಶ್ರೀ ವಿನಾಯಕ ಮಹಿಳಾ ಮಂಡಳಿ ಇವುಗಳ ಸಹಯೋಗದಲ್ಲಿ ಜೂ.14  ರಂದು ವಿಶ್ವ ಪರಿಸರ  ದಿನದ ಪ್ರಯುಕ್ತ ಮಾರುತಿ ನಗರ ದ ರಸ್ತೆ ಬದಿಯಲ್ಲಿ ಸ್ವಚ್ಛತಾ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.  ಕೆಮ್ರಾಲ್ ಗ್ರಾಮ ಪಂಚಾಯತ್ ಪಿ.ಡಿ.ಒ  ಅರುಣ್ ಪ್ರದೀಪ್ ಡಿಸೋಜ, ಜೈ ತುಳುನಾಡು (ರಿ) ಸ್ಥಾಪಕ ಸದಸ್ಯ  ಕಿರಣ್ ತುಳುವ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕ  ನಾರಾಯಣ ಕುಂದರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಪಕ್ಷಿಕೆರೆಯ  ಅಧ್ಯಕ್ಷ  ಗಣಪತಿ ಆಚಾರ್ಯ,  ವಿನಾಯಕ ಮಿತ್ರ ಮಂಡಳಿಯ  ಗೌರವಾಧ್ಯಕ್ಷ ಧನಂಜಯ್ ಪಿ ಶೆಟ್ಟಿಗಾರ್ , ಪಕ್ಷಿಕೆರೆ ಶ್ರೀವಿನಾಯಕ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಡಿ ಶೆಟ್ಟಿಗಾರ್ ,ಮಂಡಳಿಯ ಅಧ್ಯಕ್ಷ  ಧನರಾಜ್ ಅಂಚನ್,  ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಶೆಟ್ಟಿಗಾರ್, ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪಾರ್ವತಿ ಹಾಗೂ ಜಂಟಿ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದರು.