Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಂಜ:ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಐರಿನ್ ಡಿಸೋಜಾರವರಿಗೆ ಬೀಳ್ಕೊಡುಗೆ ಸಮಾರಂಭ

ಕಿನ್ನಿಗೋಳಿ  : ಸಾರ್ವಜನಿಕ ಶಿಕ್ಷಣ ಇಲಾಖೆ  ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ  ಮಂಗಳೂರು ಉತ್ತರ ವಲಯ ಇಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ  ಶ್ರೀಮತಿ ಐರಿನ್ ಡಿಸೋಜಾ ಅವರಿಗೆ ಬೀಳ್ಕೊಡುಗೆ ಸಮಾರಂಭವು  ಪಂಜ ಶಾಲಾ ವಠಾರದಲ್ಲಿ ನಡೆಯಿತು. 
ಶಾಲಾ ಎಸ್ ಡಿಎಂಸಿ ಅಧ್ಯಕ್ಷ  ನವೀನ್ ಸಾಲಿಯನ್ ಪಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಎಂ ಶೆಟ್ಟಿ ಬೈಲಗುತ್ತು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ  ವಸಂತಿ .ಕೆ  , ಸದಾನಂದ  ಶೆಟ್ಟಿ,ಮಾಜಿ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ ಪಂಜ, ನವೀನ ಶೆಟ್ಟಿ  ನಲ್ಯಗುತ್ತು ,ಸುಂದರ ಪೂಜಾರಿ ಉಲ್ಯ ,   ರಾಜೇಶ್ ಶೆಟ್ಟಿ ಮಜಲಗುತ್ತು,ಸತೀಶ್ ಶೆಟ್ಟಿ ಪಂಜದ ಗುತ್ತು, ಲಕ್ಷ್ಮಣ್ ದೇವಾಡಿಗ ,ನವಜ್ಯೋತಿ ಮಹಿಳಾ ಮಂಡಲದ  ಅಧ್ಯಕ್ಷೆ  ಮಮತಾ ಶೆಟ್ಟಿ, ಶಾಲಾ ಸಹ ಶಿಕ್ಷಕಿ ಚೈತ್ರ ಶೆಟ್ಟಿ,ಅಂಗನವಾಡಿ ಕಾರ್ಯಕರ್ತೆ ತಾರಾ ಶೆಟ್ಟಿ  ,  ಹಳೆ ವಿದ್ಯಾರ್ಥಿಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಐರಿನ್ ಡಿ ಸೋಜಾ ಅವರು ಪಂಜ ಶಾಲೆಯಲ್ಲಿ    ಕಳೆದ 15 ವರ್ಷಗಳಿಂದ  ಸೇವೆ ಸಲ್ಲಿಸಿದ್ದರು. 
ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ.ಸ್ವಾಗತಿಸಿದರು ಸಹ ಶಿಕ್ಷಕಿ ಕವಿತಾ ವಂದಿಸಿದರು.ಸಹ  ಶಿಕ್ಷಕಿ ಪಲ್ಲವಿ ಕಾರ್ಯಕ್ರಮ  ನಿರೂಪಿಸಿದರು