Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಿಕ್ಷಣಕ್ಕೆ ದಾನಿಗಳ ನೆರವು ಅಭಿನಂದನೀಯ - ಮೋಹನ್ ದಾಸ್



ಮುಲ್ಕಿ:ತೋಕೂರು ಶ್ರೀ ಸುಬ್ರಹ್ಮಣ್ಯ  ಅಂಗನವಾಡಿ ಕೇಂದ್ರದಲ್ಲಿ  ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜೀ ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ ಅಂಗನವಾಡಿ ಶಿಕ್ಷಣ ಮಕ್ಕಳ ಕಲಿಕೆಗೆ ಉತ್ತಮ ವೇದಿಕೆಯಾಗಿದ್ದು
ಮಕ್ಕಳ ಶಿಕ್ಷಣಕ್ಕೆ ದಾನಿಗಳ ನೆರವು ಅಭಿನಂದನೀಯ ಎಂದರು
ವೇದಿಕೆಯಲ್ಲಿ ಗ್ರಾ ಪಂ ಮಾಜೀ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಮಾತನಾಡಿದರು
ದಾನಿ ಹಾಗೂ ಉದ್ಯಮಿ ಹರಿಪ್ರಸಾದ್ ಜಿ ಶೆಟ್ಟಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು
ಫೇಮಸ್ ಯೂತ್ ಕ್ಲಬ್ ನ ಉಪಾಧ್ಯಕ್ಷ ಶರೀಫ್,ಅಂಗನವಾಡಿ ಸಹಾಯಕಿ  ವಿಶಾಂತಿ ಹಾಗೂ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಗುಲಾಬಿ  ಉಪಸ್ಥಿತರಿದ್ದರು 
 ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಹರಿಪ್ರಸಾದ್ ಶೆಟ್ಟಿ ರವರನ್ನು ಗೌರವಿಸಲಾಯಿತು