ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ - ಯಕ್ಷಶಿಕ್ಷಣ ತರಗತಿ ಆರಂಭ
ಕಟೀಲು :ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಧ್ರುವ - ಯಕ್ಷಶಿಕ್ಷಣ ಯೋಜನೆ 2026 - 27 ನೇ ಸಾಲಿನ ಯಕ್ಷಗಾನ ತರಗತಿಯು ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ ) ನಿಡ್ದೋಡಿ ಇದರ ಅಧೀನಕೊಳಪಟ್ಟಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ನಿಡ್ಡೋಡಿಯಲ್ಲಿ ಜೂ.8 ರ ಸೋಮವಾರದಂದು ಆರಂಭಗೊಂಡಿತು.
ಯಕ್ಷ ಧ್ರುವ ಪಟ್ಲ ಪೌಂಡೇಶನ್ ಮೂಡಬಿದ್ರೆ ಘಟಕದ ಉಪಾಧ್ಯಕ್ಷ ಶಾಂತಾರಾಮ್ ಕುಡ್ವ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಂಚಾಲಕ ಮನೋಜ್ ಕುಮಾರ್ ಶೆಟ್ಟಿ, ರವಿ ಪ್ರಸಾದ್ ಶೆಟ್ಟಿ, ಯಕ್ಷ ಗುರು ಶ?ರಕ್ಷಿತ್ ಶೆಟ್ಟಿ ಪಡ್ರೆ , ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಸಾಗರ್ ,ಮುಖ್ಯೋಪಾದ್ಯಾಯಿನಿ ಶ್ರೀಮತಿ ಸೀಮಾ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಸುಜಾತ ಸ್ವಾಗತಿಸಿದರು. ಶಿಕ್ಷಕಿ
ಶ್ರೀಮತಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.