ನಿಡ್ಡೋಡಿ, ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮತ್ತು ಪ್ರಥಮ ಪಾಲಕ- ಪೋಷಕರ ಸಭೆ
ನಿಡ್ಡೋಡಿ : ಜ್ಞಾನರತ್ನ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಂಗಸಂಸ್ಥೆಯಾದ ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಥಮ ಪಾಲಕ-ಪೋಷಕರ ಸಭೆ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ನಡೆಯಿತು.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಶ್ರೀಮತಿ ಮಲ್ಲಿಕಾ ಹರೀಶ್,ಆಡಳಿತಾಧಿಕಾರಿ ಸಾಗರ್ , ಪ್ರಾಂಶುಪಾಲ ಶ್ರೀಮತಿ ಅನುರಾಧ ಸಾಲಿಯನ್, ಮುಖ್ಯೋಪಾಧ್ಯಾಯನಿ ಶ್ರೀಮತಿ ಸೀಮಾ ಹಾಗೂ ಪ್ರಸಕ್ತ ಸಾಲಿನ ಎಸ್. ಡಿ .ಎಂ.ಸಿ. ಅಧ್ಯಕ್ಷೆ ಶ್ರೀಮತಿ ಪಾವನ , ಸಹ ಮುಖ್ಯ ಶಿಕ್ಷಕಿ ಕುಮಾರಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು.