Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಲಯನ್ಸ್ ವಲಯ ಅಧ್ಯಕ್ಷರಾಗಿ ಸಂದೀಪ್ ಸುವರ್ಣ ನಿಡ್ಡೋಡಿ ನಿಯುಕ್ತಿ



ಬಜಪೆ: ಲಯನ್ಸ್ ಕ್ಲಬ್ ನಿಡ್ಡೋಡಿ - ಕಲ್ಲಮುಂಡ್ಕೂರು ಅಧ್ಯಕ್ಷ ಸಂದೀಪ್ ಸುವರ್ಣ ನಿಡ್ಡೋಡಿ ಇವರನ್ನು 2026- 27 ರ ಸಾಲಿಗೆ ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 9 ವಲಯ 2 ರ ವಲಯ ಅಧ್ಯಕ್ಷರನ್ನಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲ  ಎಚ್.ಎಂ.ತಾರಾನಾಥ ಕೊಪ್ಪ ರವರು ನಿಯುಕ್ತಿಗೊಳಿಸಿದ್ದಾರೆ.
   ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 9 ಕೆ ಒಳಪಟ್ಟ ವಲಯ 2 ರ ವ್ಯಾಪ್ತಿಗೆ ಬರುವ ಲಯನ್ಸ್ ಕ್ಲಬ್ ನಿಡ್ಡೋಡಿ -  ಕಲ್ಲಮುಂಡ್ಕೂರು, ಲಯನ್ಸ್ ಕ್ಲಬ್ ಮುಲ್ಕಿ, ಲಯನ್ಸ್ ಕ್ಲಬ್ ಸುರತ್ಕಲ್, ಲಯನ್ಸ್ ಕ್ಲಬ್ ನ್ಯೂ ಮಂಗಳೂರು ಹೀಗೆ ಒಟ್ಟು ನಾಲ್ಕು ಕ್ಲಬ್ ಗಳನ್ನು ಮುಂದಿನ ವರ್ಷಕ್ಕೆ ನೇತೃತ್ವ ವಹಿಸಿ ಮುನ್ನಡೆಸುವ ಜವಾಬ್ದಾರಿಯನ್ನು ಲಯನ್ನು ಜಿಲ್ಲಾ ಗವರ್ನರ್ ಸಂದೀಪ್ ಸುವರ್ಣ ಅವರಿಗೆ ವಹಿಸಿದ್ದು, ಈ ಎಲ್ಲಾ ನಾಲ್ಕು ಕ್ಲಬ್ ಗಳು ಒಟ್ಟು ಸುಮಾರು 164 ಮಂದಿ ಸದಸ್ಯರನ್ನು ಒಳಗೊಂಡಿದೆ.
  ಸಂದೀಪ್ ಸುವರ್ಣ ಅವರು ಪ್ರಸ್ತುತ ವರ್ಷದಲ್ಲಿ ಕ್ಲಬ್ ಅಧ್ಯಕ್ಷರಾಗಿ ತಮ್ಮ ಕ್ಲಬ್ ನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಕ್ಲಬ್ ನ ಆಡಳಿತ ಮತ್ತು ಸೇವಾ ಚಟುವಟಿಕೆಗಳಲ್ಲಿ ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಕ್ಲಬ್ ಆಗಿ ಪ್ರಥಮ ಶ್ರೇಣಿಯ ಪ್ರಶಸ್ತಿಗೆ ಅರ್ಹತೆ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.