Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಕಿಲ್ಪಾಡಿ ಕುಮಾರ ಮಂಗಿಲ ದೇವಸ್ಥಾನ ರಸ್ತೆ ಅವ್ಯವಸ್ಥೆ ಸಂಚಾರ ದುಸ್ತರ


ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರ ಮಂಗಿಲ ದೇವಸ್ಥಾನದ ಕಚ್ಚಾ ಮಣ್ಣಿನ ರಸ್ತೆ ಭಾರೀ ಮಳೆಗೆ ಕೆಸರುಮಯವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ 
ಮಂಗಳೂರು ಉಡುಪಿ ಕೊಂಕಣ ರೈಲ್ವೇ  ಹಳಿಗಳ  ಬದಿಯಲ್ಲಿ ಕಿಲ್ಪಾಡಿ ಕುಮಾರಮಂಗಲ ದೇವಸ್ಥಾನ ರಸ್ತೆ ಹಾದು ಹೋಗುತ್ತಿದ್ದು ರಸ್ತೆ ಡಾಮರೀಕರಣಕ್ಕೆ ಅಥವಾ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಗೆ ಕೊಂಕಣ ರೈಲ್ವೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ
ಈ ಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿದ್ದು, ಸರಕಾರಿ ಶಾಲೆ ಹಾಗೂ ಪ್ರಸಿದ್ಧ ಕಿಲ್ಪಾಡಿ ಶ್ರೀ ರಾಘವೇಂದ್ರ ಮಠ ಕೂಡ ಇದೆ , ಈ ಭಾಗದ ಅನೇಕರು ಈ ರಸ್ತೆ ಬಳಸಿಕೊಂಡು ಸಂಚಾರ ಮಾಡುತ್ತಿದ್ದು ತೀವ್ರ ತೊಂದರೆಯಾಗಿದೆ
ಕಳೆದ ಬೇಸಿಗೆಯಲ್ಲಿ ಸ್ಥಳೀಯ ದಾನಿಯೊಬ್ಬರು ರಸ್ತೆ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಪಡಿಸಲು ಮುಂದಾದಾಗ ರೈಲ್ವೇ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸಿದ್ದರು. 
ಪ್ರತಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು ಈ ಬಾರಿ ವಾಹನ ಸಂಚಾರದಿಂದ ಮತ್ತಷ್ಟು  ಹದಗೆಟ್ಟಿದೆ 
ರಸ್ತೆ ನಾ ದುರಸ್ತಿಯಿಂದ ಈ ಭಾಗದ ಶಾಲಾ ಮಕ್ಕಳಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ 
ಫ್ಲೈ ಓವರ್ ನಿರ್ಮಿಸಿ 
ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕಿಲ್ಪಾಡಿ ಪಂಚಾಯಿತಿಯಿ ಬಳಿಯಿಂದ ಶಿಮಂತೂರು,ಕುಬೆವೂರು, ಕವತ್ತಾರು, ಬಳ್ಕುಂಜೆ  ಮತ್ತಿತರ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ  ಈ ರಸ್ತೆಯ ಭಾಗದಲ್ಲಿ ಕೊಂಕಣ ರೈಲ್ವೇ ಹಳಿ ಹಾದು ಹೋಗುತ್ತಿದ್ದ ಫ್ಲೈ ಓವರ್ ಅವಶ್ಯಕತೆ ಇದೆ. 
ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಕೊಂಕಣ ರೈಲ್ವೇ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ 
ಇದೀಗ ವಾಹನ ಸವಾರರು ಸುತ್ತು ಬಳಸಿ ಸಂಚಾರ ಮಾಡುತ್ತಿದ್ದು ಪ್ರಯಾಣ ತ್ರಾಸದಾಯಕವಾಗಿ ಪರಿಣಮಿಸಿದೆ.
ಕೂಡಲೇ ಕೊಂಕಣ ರೈಲ್ವೇ ಅಧಿಕಾರಿಗಳು  ಕುಮಾರ ಮಂಗಿಲ ರಸ್ತೆ ದುರಸ್ತಿ ಜೊತೆಗೆ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾದ ಫ್ಲೈ ಓವರ್  ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.