ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಶ್ರೀ ವೀರಭದ್ರ ದೇವರ ನೂತನ ಗರ್ಭಗುಡಿ, ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮ
ಮುಲ್ಕಿ: ದೇವಳದ ಜೀರ್ಣೋದ್ದಾರದ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯವಿದ್ದು ಎಲ್ಲರೂ ಸಂಘಟಿತರಾಗಿ ದೇವರ ಸೇವೆ ಮಾಡಬೇಕು ಎಂದು ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಹೇಳಿದರು
.ಅವರು ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಶ್ರೀ ವೀರಭದ್ರ ದೇವರ ನೂತನ ಗರ್ಭಗುಡಿ, ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು
ಇದೇ ಸಂದರ್ಭ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಡುಪಿ ನಿರ್ದೆಶನದಲ್ಲಿ ಅರ್ಚಕ ಕೃಷ್ಣ ಭಟ್ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಯಿತು.
ಬೆಂಗಳೂರಿನ ಕೈಗಾರಿಕಾ ಉದ್ಯಮಿ ದಾಮೋದರ್ ದಂಪತಿ ಶಿಲಾನ್ಯಾಸ ನೆರವೇರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ದೀಪ ಪ್ರಜ್ವಲನೆ ನೆರವೇರಿಸಿದರು. ಉದ್ಯಮಿ ಎಂ.ಪ್ರಶಾಂತ್ ಶೇಟ್ ಮಂಗಳೂರು, ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ
ಪುರಂದರ ಶೆಟ್ಟಿಗಾರ್, ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಉಮಾನಾಥ ಜೆ.ಶೆಟ್ಟಿಗಾರ್, ಕ್ ಗುರಿಕಾರರಾದ ರಾಮ ಗುರಿಕಾರ್, ಬಿ.ರತ್ನಾಕರ್
ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಅಪ್ಪು ಗುರಿಕಾರ್, ಲಕ್ಷ್ಮಣ್ ಗುರಿಕಾರ್, ವಾಚನಾಲಯ ಅಧ್ಯಕ್ಷ ಹರಿಪ್ರಸಾದ್ ಕೊಲ್ನಾಡು, ಮಹಿಳಾ ವೇದಿಕೆ ಅಧ್ಯಕ್ಷೆ ವೇದಾವತಿ, ವಾಚನಾಲಯ ಮಾಜೀ ಅಧ್ಯಕ್ಷ ನವೀನ್ ಶೆಟ್ಟಿಗಾರ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಸದ ಕ್ಯಾ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು
ಲಕ್ಷ್ಮಣ್ ಗುರಿಕಾರ್ ಸ್ವಾಗತಿಸಿದರು. ಕಾಂತಣ್ಣ ಗುರಿಕಾರ ಪ್ರಸ್ತಾವಿಸಿದರು. ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪಿತಾಂಬರ್ ಶೆಟ್ಟಿಗಾರ್ ವಂದಿಸಿದರು. ಶಂಕರ್ ಶೆಟ್ಟಿಗಾರ್ ಬೆಳ್ಳಾಯರು ಮತ್ತು ಅಂಜನ್ ಕುಮಾರ್ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.