ಕಾರ್ನಾಡ್ ಸಿಯಸ್ಐ ಶಾಲೆಯಲ್ಲಿ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ, ವಿದ್ಯಾರ್ಥಿಗಳ ರ‍್ಯಾಲಿ
ಮುಲ್ಕಿ : ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ಮತ್ತು ಸಿ.ಎಸ್.ಐ. ಆಂಗ್ಲ ಮಾಧ್ಯಮ ಶಾಲೆ, ಕಾರ್ನಾಡು, ಮೂಲ್ಕಿ ಇವರ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ, ತಂಬಾಕು, ಮದ್ಯಪಾನಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ರ‍್ಯಾಲಿ ಮಂಗಳವಾರದಂದು ಸಿ.ಎಸ್.ಐ. ಆಂಗ್ಲ ಮಾಧ್ಯಮ ಶಾಲೆ, ಕಾರ್ನಾಡಿನಲ್ಲಿ ನಡೆಯಿತು.
ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ರ‍್ಯಾಲಿಯು ಸಿಯಸ್ಐ ಶಾಲೆಯಿಂದ ಕಾರ್ನಾಡು ಗಾಂಧಿ ಮೈದಾನದವರೆಗೆ ಸಾಗಿ ಬಂದಿತು.
ಮುಲ್ಕಿ ಠಾಣಾ ಎ ಎಸ್ ಐ ರೇವಣ್ಣ ರ‍್ಯಾಲಿಗೆ ಚಾಲನೆ ನೀಡಿ ಬಳಿಕ ಜರಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಳ್ಳೆಯ ಚಿಂತನೆಯೊಂದಿಗೆ ಒಳ್ಳೆಯ ಸಹಪಾಠಿಗಳ ಒಡನಾಟ ಜೀವನ ಉತ್ತಮವಾಗಿ ರೂಪು ಪಡೆಯಬಹುದು. ಮಾದಕ ವ್ಯಸನಗಳಿಂದ ಆರೋಗ್ಯದ ಜೊತೆಗೆ ಸಮಾಜದಲ್ಲಿ ಅಪರಾಧ ಪ್ರಮಾಣವು ಜಾಸ್ತಿಯಾಗುತ್ತದೆ. ಯುವಪೀಳಿಗೆ ಮಾರ್ಗದರ್ಶನ ನೀಡುವ ಮೂಲಕ ಮಾದಕ ವಿರೋಧಿ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ.ಹರ್ಷರಾಜ್ ಶೆಟ್ಟಿ ಜಿ.ಎಮ್. ಅಧ್ಯಕ್ಷತೆ ವಹಿಸಿ, ಪ್ರಸ್ತಾವನೆಗೈದರು.
ಲಯನ್ಸ್ ಮಾಜಿ ಅಧ್ಯಕ್ಷ ಲ.ಸದಾಶಿವ ಹೊಸದುರ್ಗ, ಲ.ವಿಶ್ವನಾಥ ಶೆಟ್ಟಿ, ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ ಉಪಸ್ಥಿತರಿದ್ದರು.ಲ.ಹರ್ಷರಾಜ್ ಶೆಟ್ಟಿ ಜಿ.ಎಮ್ ಸ್ವಾಗತಿಸಿದರು.ಶಿಕ್ಷಕಿ ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿ, ಶಾಲಾ ಸಂಚಾಲಕ ರಂಜನ್ ಜತ್ತನ್ನ ವಂದಿಸಿದರು.