Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಹಿಂದುಳಿದ ವರ್ಗದ ಅಭಿವೃದ್ಧಿಗೆ ಸರಕಾರ ಬದ್ಧ- ಮಾಜೀ ಸಚಿವ ಆರ್ ಬಿ ತಿಮ್ಮಾಪುರ

ಮುಲ್ಕಿ: ಅವಿಭಾಜಿತ ದಕ್ಷಿಣ; ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ  ಆಶ್ರಯದಲ್ಲಿ  2025- 26 ನೇ ಸಾಲಿನ  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದಿರುವ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಮುಲ್ಕಿ ಆದಿಧನ್ ಸಭಾಂಗಣದಲ್ಲಿ ನಡೆಯಿತು  ಕರ್ನಾಟಕ ಸರ್ಕಾರದ ಮಾಜೀ ಸಚಿವ ಆರ್ ಬಿ ತಿಮ್ಮಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಹಿಂದುಳಿದ ವರ್ಗದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು  
ಮುಖ್ಯ ಅತಿಥಿಗಳಾಗಿ ಶಾಸಕರಾದ ಉಮಾನಾಥ ಕೋಟ್ಯಾನ್, ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ , ಉಡುಪಿ ಕ್ಷೇತ್ರದ ಶಿಕ್ಷಣಾಧಿಕಾರಿ ಎಲ್ಲಮ್ಮ , ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ , ಡಾ.ದೇವೇಂದ್ರಪ್ಪ ಎಚ್ , ಡಾ. ಸಂಗಪ್ಪ  ಶ್ಯಾಮ್ ನಾಟಿಕರ್ ರಮೇಶ್ ಗುಬ್ಬೆವಾಡ,, ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್, ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಎಚ್ ಪೂಜಾರ್ ಉಪಾಧ್ಯಕ್ಷ ವಿಠ್ಠಲ್ ಎನ್ ಎಂ ಉಪಾಧ್ಯಕ್ಷರು ದೀಪಕ್ ಪೂಜಾರಿ ದುರ್ಗಾ ಪ್ರಸಾದ್ ಹನುಮಂತ ಡಿ ಪೂಜಾರ್ ಹುಲಿಗೇಶ ಎಂ ಶರಣು ಬಿಸ್ನಾಳ್ ಭೀಮಾಶಂಕರ ಆರ್ ಕೆ ಸಿದ್ದು ಆರ್ ರಮೇಶ್ ಹಂಗರಗಿ ,  ಶ್ರೀರಾಮಚಂದ್ರ ದೊಡ್ಡಮನಿ, ಮತ್ತಿತರರು ಉಪಸ್ಥಿತರಿದ್ದರು 
ಉಮೇಶ್ ಎಚ್ ಸ್ವಾಗತಿಸಿದರು ಶಿವಾನಂದ ಆರ್. ಕೆ ನಿರೂಪಿಸಿದರು