Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ: ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರ

ಮೂಲ್ಕಿ: ಶ್ರೀ ನಾರಾಯಣ ಗುರು  ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಹಾಗೂ  ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಜೂ.16 ರಂದು  ವೃತ್ತಿ ಮಾರ್ಗದರ್ಶನ ಕಾರ್ಯಗಾರವು  ನಡೆಯಿತು. ಸರಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ. ದಿನಕರ್  ಅವರು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ, ಉನ್ನತ ಶಿಕ್ಷಣದ ಅವಕಾಶಗಳು, ಭವಿಷ್ಯದ ಯೋಜನೆಗಳ ಕುರಿತು ಮೌಲ್ಯಯುತ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಿದರು. ತಮ್ಮ ಜೀವನದಲ್ಲಿ ತಾಳ್ಮೆ, ಸಂಯಮ ಮತ್ತು ಪರಿಶ್ರಮದೊಂದಿಗೆ ಗುರಿಯನ್ನು ರೂಪಿಸಿಕೊಂಡು ಮುಂದೆ ಸಾಗಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
 ಸಂಸ್ಥೆಯ ಕಾರ್ಯದರ್ಶಿ  ಬಾಲಚಂದ್ರ ಸನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಈ ಸಂದರ್ಭ ಟ್ರಸ್ಟಿನ ಸದಸ್ಯ ಯೋಗೀಶ್ ಕೋಟ್ಯಾನ್, ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ ಕೆ.ವಿ, ಪ್ರಾಂಶುಪಾಲ  ಯತೀಶ್  ಉಪಸ್ಥಿತರಿದ್ದರು.
ಭೌತಶಾಸ್ತ್ರ  ಉಪನ್ಯಾಸಕಿ ಶ್ರೀಮತಿ ಅನುಷ  ಸ್ವಾಗತಿಸಿದರು. ರಾಸಾಯನಿಕ ಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಸುನಿತಾ ಕೆ. ವಂದಿಸಿದರು.ಶ್ರೀಮತಿ ಕಾವ್ಯ  ಕಾರ್ಯಕ್ರಮ ನಿರೂಪಿಸಿದರು.