ಮೂಲ್ಕಿ ರೋಟರಿ ಕ್ಲಬ್‌ಗೆ 'ಪ್ಲಾಟಿನಂ ಪ್ಲಸ್' ಪ್ರಶಸ್ತಿ
ಮೂಲ್ಕಿ: ರೋಟರಿ ಜಿಲ್ಲೆಯಲ್ಲಿ ಅತ್ಯಧಿಕ ಸಮಾಜ ಸೇವೆಗಾಗಿ ನೀಡುವ ಪ್ರಶಸ್ತಿಗಳಲ್ಲಿ 'ಪ್ಲಾಟಿನಂ ಪ್ಲಸ್' ಪ್ರಶಸ್ತಿ ಯನ್ನು ಮೂಲ್ಕಿ ರೋಟರಿ ಕ್ಲಬ್‌ಗೆ ನೀಡಲಾಗಿದೆ.
ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರಾಮಕೃಷ್ಣ ಪಿ.ಕೆ.ಯವರಿಂದ ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷರಾದ ಜೇಮ್ಸ್ ಪೀಟರ್ ಡಿಸೋಜಅವರು ಸ್ವೀಕರಿಸಿದರು.
ಈ ಸಂದರ್ಭ ಡಿಜಿಎನ್ ಯಶಸ್ವಿ ಸೋಮಶೇಖರ್, ಪಿಡಿಜಿ ವಿಕ್ರಮ್ ದತ್ತ, ಎಜಿ ರಾಬರ್ಟ್ ಫ್ರಾಂಕ್ಲಿನ್ ರೆಗೊ, ಎಜಿಎನ್ ಜೋಯಲ್ ಹೆರಾಲ್ಡ್ ಡಿಸೋಜ ಮತ್ತು ಪಿಎಜಿ ಡಾ. ಅರವಿಂದ್ ಭಟ್ ಅವರು ಉಪಸ್ಥಿತರಿದ್ದರು.