ನಾಡಪ್ರಭು ಕೆಂಪೇಗೌಡ ಸಾಧನೆ ಸ್ಮರಣೀಯ-ದಿಲೀಪ್ ರೋಡ್ಕರ್
ಮುಲ್ಕಿ: ಬೆಂಗಳೂರು ನಗರದ ನಿರ್ಮಾಣದ ಜೊತೆಗೆ ಅದರ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಯಲಹಂಕದ ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿಗೂ ಸ್ಮರಣೀಯವಾಗಿದೆ ಎಂದು ಮುಲ್ಕಿ ತಾಲೂಕು ಉಪ ತಹಶಿಲ್ದಾರ್ ದಿಲೀಪ್
ರೋಡ್ಕರ್ ಹೇಳಿದರು ಅವರು ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ
ಅವರು ಮುಲ್ಕಿ ತಾಲೂಕು ಪ್ರಜಾಸೌಧ, ಆಡಳಿತ ಕೇಂದ್ರದಲ್ಲಿ ಕೆಂಪೇಗೌಡರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಬೆಂಗಳೂರು ನಗರದ ಅಭಿವೃದ್ಧಿ ಜೊತೆಗೆ ಸಾಹಿತ್ಯ ಸೇವೆ, ದೇವಾಲಯಗಳ ನಿರ್ಮಾಣ, ವೈಜ್ಞಾನಿಕ ನಗರ ಯೋಜನೆ, ಜಲ ಸಂರಕ್ಷಣೆ ಯಲ್ಲಿ ಕೆಂಪೇಗೌಡರ ಕೊಡುಗೆ ಅನನ್ಯ, ಕೃಷಿ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ಅವರ ಸಾಧನೆ ಸ್ಮರಣೀಯ ಎಂದರು
ಈ ಸಂದರ್ಭ ಉಪತಹಶಿಲ್ದಾರ್ ವಿಲ್ಮಾ ಡಿಕೋಸ್ಟ,ಕಂದಾಯ ಇಲಾಖೆಯ ಅಧಿಕಾರಿ ಮೋಹನ್ ಹಾಗೂ ಆಡಳಿತ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು