ಮುಲ್ಕಿ: ಕೆ ಎಸ್ ರಾವ್ ನಗರಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅದ್ದೂರಿ ಆರಂಭ
ಮುಲ್ಕಿ: ಕೆಎಸ್ ರಾವ್ ನಗರ ಪಿ. ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ವತಿಯಿಂದ
ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಣೆಯ ಜೊತೆಗೆ ಕ್ಲಬ್ ವತಿಯಿಂದ ಪೆನ್ಸಿಲ್ ಗಳನ್ನು ಹಂಚಲಾಯಿತು.
ಈ. ಸಂದರ್ಭ ಕ್ಲಬ್ ನಿಯೋಜಿತ ಅಧ್ಯಕ್ಷ ಕಲ್ಲಪ್ಪ ತಡವಲಗ, ಮಾಜೀ ಅಧ್ಯಕ್ಷ ಸುಧೀರ್ ಬಾಳಿಗ, ನಿಯೋಜಿತ ಕಾರ್ಯದರ್ಶಿ ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದಿನೇಶ್ ಕೆ, ಹರಿಪ್ರಸಾದ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೋಷಕರು-ಶಿಕ್ಷಕರು ವಿದ್ಯಾರ್ಥಿಗಳ ಜಾಥಾದಲ್ಲಿ ಭಾಗವಹಿಸಿ, ಮಕ್ಕಳಿಗೆ ಪುಷ್ಪಸ್ವಾಗತ, ಸಿಹಿ ಹಂಚುವ ಮೂಲಕ ಶಾಲಾರಂಭದ ದಿನದಂದು ಮಕ್ಕಳ ಮುಖದಲ್ಲಿ ಸಂತಸ ಮೂಡಿಸಲಾಯಿತು