Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬೆಥನಿ ಶಾಲೆಯಲ್ಲಿ ವಿದ್ಯಾರ್ಥಿ ಸಚಿವ ಸಂಪುಟದ ಪದಗ್ರಹಣ

ಮುಲ್ಕಿ: ಕಿಲ್ಪಾಡಿಯ ಬೆಥನಿ ಐಸಿಎಸ್ಇ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಚಿವ ಸಂಪುಟದ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಬೆಥನಿ ಶಿಕ್ಷಣ ಸಂಸ್ಥೆಗಳ ಮಂಗಳೂರು ಪ್ರಾಂತ್ಯದ ಸಂಯೋಜಕಿ ಡಾ. ಸಿಸ್ಟರ್ ಮರಿಯೋಲಾ ಬಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ  ಶಿಸ್ತು, ಮೌಲ್ಯಗಳು ಹಾಗೂ  ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಮಾದರಿ ನಾಯಕರಾಗಿ ಬೆಳೆಯಬೇಕು ಎಂದರು.


ಪ್ರಾಂಶುಪಾಲೆ ಭಗಿನಿ ಜೆಸಿಂತಾ ಕ್ರಾಸ್ತಾ ಬಿ.ಎಸ್.  ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶಾಲೆಯ ಗೌರವವನ್ನು ಹೆಚ್ಚಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಲವಿಶಾ ವೆನಿಶಾ ಡಿ’ಸೋಜಾ ಮಾತನಾಡಿ  ವಿದ್ಯಾರ್ಥಿಗಳು ಆತ್ಮವಿಶ್ವಾಸ, ಜವಾಬ್ದಾರಿ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಉತ್ತಮ ನಾಯಕರಾಗಬೇಕು ಎಂದು ಹೇಳಿದರು.


ಶಾಲಾ ಬ್ಯಾಂಡ್‌ನ ನೇತೃತ್ವದಲ್ಲಿ ವಿದ್ಯಾರ್ಥಿ ಸಚಿವ ಸಂಪುಟದ ಸದಸ್ಯರು ಸಭಾಂಗಣ ಪ್ರವೇಶಿಸಿದರು. ನೂತನ ಪದಾಧಿಕಾರಿಗಳಿಗೆ ಸ್ಯಾಶ್ ಮತ್ತು ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು. ಪ್ರಾಂಶುಪಾಲೆ ಭಗಿನಿ ಜೆಸಿಂತಾ ಕ್ರಾಸ್ತಾ ಬಿ.ಎಸ್. ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.


ಶಾಲೆಯ ಕರಸ್ಪಾಂಡೆಂಟ್ ಸಿಸ್ಟರ್ ಅರುಣ್ ಸವಿಯೋ ಬಿ.ಎಸ್. ಹಾಗೂ ಹಳೆ ವಿದ್ಯಾರ್ಥಿನಿ ಮತ್ತು ಸ್ಟೋರಿಫೈ ಮಂಗಳೂರು ಸಂಸ್ಥೆಯ ಕಾರ್ಯಾಚರಣೆ ಮುಖ್ಯಸ್ಥೆ ಲವಿಶಾ ವೆನಿಶಾ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಭಗಿನಿ ಶರೀನಾ ಬಿ.ಎಸ್. ಸ್ವಾಗತಿಸಿದರು. ಶಿಕ್ಷಕಿ ದೀಪಿಕಾ ವಂದನಾರ್ಪಣೆಗೈದರು .ಶಿಕ್ಷಕಿ ಝೈರಾ ಕಾರ್ಯಕ್ರಮ ನಿರೂಪಿಸಿದರು