ಮುಲ್ಕಿ: ಆರೋಗ್ಯವಂತ ಸಮಾಜ, ಪೋಲಿಯೋ ಮುಕ್ತ ಭಾರತಕ್ಕೆ ಪಣತೊಡಬೇಕಾಗಿದೆ-ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಮುಲ್ಕಿ: ಪೋಲಿಯೊ ಒಂದು ಅಪಾಯಕಾರಿ ವೈರಸ್‌ನಿಂದ ಉಂಟಾಗುವ ರೋಗವಾಗಿದೆ. ಇದು ಮಕ್ಕಳ ಕೈ-ಕಾಲುಗಳನ್ನು ಶಾಶ್ವತವಾಗಿ ದುರ್ಬಲಗೊಳಿಸಬಹುದು ಅಥವಾ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಆದರೆ, ಪೋಲಿಯೊ ಲಸಿಕೆ ನೀಡುವುದರಿಂದ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಂದು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಅಂತರಾಷ್ಟ್ರೀಯ ವಾಸ್ತುತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಪೋಲಿಯೋ ಮುಕ್ತ ಅಭಿಯಾನಕ್ಕೆ
ಚಾಲನೆ ನೀಡಿ ಮಾತನಾಡಿದರು
ಅವರು ಮಾತನಾಡಿ ಪೋಲಿಯೊ ಹನಿಯ ಮುಖ್ಯ ಉಪಯೋಗವೆಂದರೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಪೋಲಿಯೊ ವೈರಸ್‌ನಿಂದ ರಕ್ಷಿಸುವುದು. ಇದು ಸುರಕ್ಷಿತ, ಉಚಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ.,ಪ್ರತಿ ಬಾರಿ ಸರ್ಕಾರ ಆಯೋಜಿಸುವ ಪಲ್ಸ್ ಪೋಲಿಯೊ ಅಭಿಯಾನದಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಇದರಿಂದ ಆರೋಗ್ಯವಂತ ಸಮಾಜ ಮತ್ತು ಪೋಲಿಯೊ ಮುಕ್ತ ಭಾರತ ನಿರ್ಮಾಣ ಸಾಧ್ಯ.“ಎರಡು ಹನಿ ಜೀವನದ ರಕ್ಷಣೆ – ಪ್ರತಿಯೊಂದು ಮಗುವಿಗೂ ಪೋಲಿಯೊ ಹನಿ ಖಚಿತಪಡಿಸೋಣ.” ಎಂದರು
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್,ಸಂಚಾಲಕ ಪುನೀತ್ ಕೃಷ್ಣ, ಆಶ್ರಮದ ಸೇವಾ ಭಕ್ತರಾದ ಶರತ್ ಕಾರ್ನಾಡ್,
ಮಾಜೀ ತಾ. ಪಂ.ಸದಸ್ಯ ಶರತ್ ಕುಬೆವೂರು, ಕಿಲ್ಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಯತೀಶ್ ಕೊಲಕಾಡಿ ಹಾಗೂ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.