Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ:ಶ್ರೀ ನಾರಾಯಣ ಗುರು ಎಜ್ಯುಕೇಶನಲ್ ಇನ್ಸ್ಟಿಟ್ಯೂಷನ್ಸ್, “ಅಂತಾರಾಷ್ಟ್ರೀಯ ಯೋಗ ದಿನಾಚರಣೆ”

ಮೂಲ್ಕಿ:ಶ್ರೀ ನಾರಾಯಣ ಗುರು ಎಜ್ಯುಕೇಶನಲ್ ಇನ್ಸ್ಟಿಟ್ಯೂಷನ್ಸ್, ಮುಲ್ಕಿ ಇವರ ವತಿಯಿಂದ  ಜೂ.ರಂದು   ಸಂಸ್ಥೆಯ ಓಪನ್ ಏರ್ ಸ್ಟೇಜ್ ನಲ್ಲಿ “ಅಂತಾರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
 ಕಾರ್ಯಕ್ರಮವನ್ನು, ಕಾರ್ಯದರ್ಶಿ  ಬಾಲಚಂದ್ರ ಸನಿಲ್ ಉದ್ಘಾಟಿಸಿ,   ಯೋಗದ ಮಹತ್ವ, ದೇಹ ಮತ್ತು ಮನಸ್ಸಿನ ಸಮತೋಲನ ಹಾಗೂ ಆರೋಗ್ಯಕರ ಜೀವನಕ್ಕಾಗಿ ಯೋಗದ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ  ಹರೀಂದ್ರ  ಸುವರ್ಣ  ವಹಿಸಿದ್ದರು. ಯೋಗ ತರಬೇತು ದಾರ ಜಯ ಕುಮಾರ್  ಕುಬೆವೂರು  ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ  ಯತೀಶ್ , ಶಾಲಾ ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ  ಕೆ. ವಿ   ಉಪಸ್ಥಿತರಿದ್ದರು.

ಶ್ರೀಮತಿ ತೇಜಸ್ವಿನಿ ಸ್ವಾಗತಿಸಿದರು. ಶಿಕ್ಷಕ  ಪ್ರಥ್ವಿರಾಜ್ ನಿರೂಪಿಸಿದರು .
  ಶ್ರೀಮತಿ ಪ್ರಮೀಳಾ ಧನ್ಯವಾದವಿತ್ತರು. 


 “ಯೋಗ – ದೇಹ, ಮನಸ್ಸು ಮತ್ತು ಆತ್ಮದ ಏಕತೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.