ಅಂಗರಗುಡ್ಡೆಯ ಶ್ರೀರಾಮ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಯೋಗ ಶಿಬಿರದ ಉದ್ಘಾಟನೆ
ಮೂಲ್ಕಿ:ಅಂಗರಗುಡ್ಡೆಯ ಶ್ರೀರಾಮ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಯೋಗ ಶಿಬಿರದ ಉದ್ಘಾಟನೆಯನ್ನು ಯೋಗ ಗುರುಗಳಾದ ಕೆಂಚನಕೆರೆಯ ಜಯ ಮುದ್ದು ಶೆಟ್ಟಿಯವರು ಶ್ರೀರಾಮ ಭಜನಾ ಮಂದಿರದಲ್ಲಿ ಇಂದು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡ ಈಶ್ವರ್ ಕಟೀಲ್ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸುಧೀರ್ ಶೆಟ್ಟಿ, ಯೋಗ ಶಿಕ್ಷಕ ಜಯ ಸಿ ಸಾಲ್ಯಾನ್ ಅಂಗರಗುಡ್ಡೆ, ಮಹಿಳಾಮಂಡಲದ ಅಧ್ಯಕ್ಷೆ ಮೋಹಿನಿ ಕೋಟ್ಯಾನ್, ಚಂದ್ರಶೇಖರ್, ಸಂಪತ್ ಕುಮಾರ್, ದಿನೇಶ್ ಕೋಟ್ಯಾನ್, ಸತೀಶ್ ಆಚಾರ್ಯ, ವಿಜಯ್ ಭಂಡಾರಿ, ಗುಣಪಾಲ್, ಜೀವನ್ ಶೆಟ್ಟಿ ಅಂಗರೆಗುಡ್ಡೆ, ಉದ್ಯಮಿ ತಾರಾನಾಥ್ ದೇವಾಡಿಗ, ಅನಿತಾ ಶೆಟ್ಟಿ, ಕಾವ್ಯ ಶೆಟ್ಟಿ, ಪುಷ್ಪ ಶೆಟ್ಟಿ, ರೂಪಾಕ್ಷಿ ಶೆಟ್ಟಿಗಾರ್, ಪುಷ್ಪ ಸಾಲ್ಯಾನ್ ಹಾಗೂ ಶ್ರೀರಾಮ ಭಜನಾ ಮಂದಿರದ ಸದಸ್ಯರು ಪಾಲ್ಗೊಂಡರು.
.
ಪ್ರತಿ ದಿನ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಉಚಿತ ಯೋಗ ಶಿಬಿರ ನಡೆಯಲಿದೆ