Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ನಿವೃತ್ತ ಯೋಧನಿಂದ ಮಳೆ ನೀರು ಹರಿದು ಹೋಗುವ ಚರಂಡಿ ದುರಸ್ತಿ

ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಬೆವೂರು ಶಿಮಂತೂರು ದೇವಸ್ಥಾನ ಸಂಪರ್ಕದ ರಸ್ತೆಯಲ್ಲಿ ಶ್ರೀ ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಚರಂಡಿಯಲ್ಲಿ ಹೂಳು ತುಂಬಿ  ಮಳೆ ನೀರು  ರಸ್ತೆಯಲ್ಲಿ ಹರಿದು ಹೋಗುತ್ತಿದ್ದು ಈ ಬಗ್ಗೆ ಅನೇಕ ಬಾರಿ ಕಿಲ್ಪಾಡಿ ಪಂಚಾಯತ್ ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಚರಂಡಿ ಅವ್ಯವಸ್ಥೆ ಬಗ್ಗೆ ಗಮನಿಸಿದ  ಕುಬೇವೂರಿನ ನಿವೃತ್ತ  ಯೋಧ ನಾರಾಯಣ ರೈ ರವರು ತಾವೇ ಸ್ವತಹ ಹಾರೆ, ಪಿಕ್ಕಾಸ್, ಕತ್ತಿ ಹಿಡಿದು ತಾತ್ಕಾಲಿಕ ನೆಲೆಯಲ್ಲಿ ರಸ್ತೆಗೆ  ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದ್ದಾರೆ ಹಾಗೂ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ 
ಕುಬೆವೂರು - ಶಿಮಂತೂರು ದೇವಸ್ಥಾನದ ರಸ್ತೆಯಲ್ಲಿ ಪ್ರತೀ ಮಳೆಗಾಲದ ಪೂರ್ವ ಸಿದ್ಧತೆ ನಡೆಸದೆ  ಸಮಸ್ಯೆ ಉಂಟಾಗುತ್ತಿದ್ದು
ನಾಗರಿಕರು ಪಂಚಾಯತ್ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ 
ಈ ಭಾಗದಲ್ಲಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ವಿದ್ಯುತ್ ತಂತಿಗೆ ತಾಗುವ ಮರದ ಗೆಲ್ಲುಗಳನ್ನು ಕಡಿದು ಚರಂಡಿಯಲ್ಲಿ ಹಾಕಿದ್ದು ತೆರವುಗೊಳಿಸಿಲ್ಲ. ಈ ಬಗ್ಗೆ ಅನೇಕ ಬಾರಿ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮಾಹಿತಿ  ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಇಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ