ಮುಲ್ಕಿ: ರೈಲ್ವೇ ನಿಲ್ದಾಣ ಅಭಿವೃದ್ಧಿಗೆ 6.5 ಕೋಟಿ ಅನುದಾನ; ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಉಮಾನಾಥ ಕೋಟ್ಯಾನ್ ರವರು ಜಂಟಿಯಾಗಿ ಸೋಮವಾರ ಮಧ್ಯಾಹ್ನ ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ನೂತನ ಪ್ಲಾಟ್ಫಾರ್ಮ್ ಸಹಿತ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು
ಬಳಿಕ ಮಾಧ್ಯಮದೊಂದಿಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಮಾತನಾಡಿ ಮುಲ್ಕಿ ರೈಲ್ವೇ ನಿಲ್ದಾಣ ಸುಮಾರು 6.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, 2.05 ಕೋಟಿ ವೆಚ್ಚದ ಒಂದನೇ ಪ್ಲಾಟ್ಫಾರ್ಮ್ ಹಾಗೂ ಶೆಲ್ಟಲ್ಟರ್ ಕಾಮಗಾರಿ,2.40 ಕೋಟಿ ವೆಚ್ಚದಲ್ಲಿ ನೂತನ ಎರಡನೇ ಪ್ಲಾಟ್ಫಾರ್ಮ್, 19 ಲಕ್ಷ ವೆಚ್ಚದಲ್ಲಿ ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿ, 2.45 ಕೋಟಿ ವೆಚ್ಚದಲ್ಲಿ ನಡೆದಿದೆ
ಸುಮಾರು 2.45 ಕೋಟಿ ವೆಚ್ಚದಲ್ಲಿ ಎರಡು ಫ್ಲ್ಯಾಟ್ ಫಾರ್ಮ್ ಗಳನ್ನು ಸಂಪರ್ಕಿಸುವ ನೂತನ ಫುಟ್ ಓವರ್ ಬ್ರಿಜ್ ಕಾಮಗಾರಿಗೆ ಟೆಂಡರ್ ಆಗಿದ್ದು ಶೀಘ್ರ ಕಾಮಗಾರಿ ನಡೆಯಲಿದೆ ಎಂದರು.
ಅವರು ಮಾತನಾಡಿ ಶಿರಾಡಿ ಘಾಟಿ ಹಳಿ ವಿದ್ಯುದೀಕರಣ ಕಾಮಗಾರಿ ಶೀಘ್ರ ನಡೆಯಲಿದ್ದು ಬಳಿಕ ಮಂಗಳೂರು -ಬೆಂಗಳೂರು ರೈಲ್ವೇ ಹಳಿ ದ್ವಿಪಥಗೊಳ್ಳಲಿದೆ ಎಂದರು
ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಭಾರತೀಯ ರೈಲ್ವೇ ಜೊತೆಗೆ ಕೊಂಕಣ ರೈಲ್ವೆ ವಿಲಿನಕ್ಕೆ ರಾಜ್ಯ ಸರ್ಕಾರದ ಸಹಭಾಗಿತ್ವ ಬೇಕಾಗಿದೆ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿದರೆ ಕರಾವಳಿಯಲ್ಲಿ ವಿಪುಲ ಪ್ರವಾಸೋದ್ಯಮ ಸಾಧ್ಯ ಎಂದರು
ಶೀಘ್ರ ಹಳೆಯಂಗಡಿ ರೈಲ್ವೇ ಮೇಲ್ಸೇತುವೆ
ಜನರ ಬಹು ನಿರೀಕ್ಷೆಯ ಹಳೆಯಂಗಡಿ ರೈಲ್ವೇ ಮೇಲ್ಸೇತುವೆಗೆ ಭೂ ಸ್ವಾದೀನ ಸಮಸ್ಯೆ ಇದ್ದು ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯರ ಒಪ್ಪಿಗೆ ಪಡೆದು ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದರು
ಕೊಂಕಣ ರೈಲ್ವೇ ಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ , ಪ್ರವಾಸೋದ್ಯಮದ ಹಿತ ದೃಷ್ಟಿಯಿಂದ ರೈಲ್ವೇ ಹಳಿಗಳ ದ್ವಿಪಥ ಪ್ರಮುಖವಾಗಿದ್ದು ಅಭಿವೃದ್ಧಿ ಬಳಿಕ ಮುಲ್ಕಿಯಲ್ಲಿ ಪ್ರಧಾನ ರೈಲುಗಳ ನಿಲುಗಡೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು
ಇದೇ ಸಂದರ್ಭದಲ್ಲಿ ನಿಲ್ದಾಣದ ಒಳಚರಂಡಿ ಅವ್ಯವಸ್ಥೆ ಸರಿಪಡಿಸಬೇಕು ಹಾಗೂ ರೈಲ್ವೇ ನಿಲ್ದಾಣದ ಪ್ಲಾಟ್ಫಾರ್ಮ್ ಬದಿಯಲ್ಲಿ ಬೆಳೆದಿರುವ ಅಪಾಯಕಾರಿ ಹುಲ್ಲುಗಳನ್ನು ತೆರವು ಮಾಡಬೇಕು ಹಾಗೂ
ನಿಲ್ದಾಣದ ನೂತನ ಫ್ಲಾಟ್ ಫಾರ್ಮ್ ನ ಶೆಲ್ಟರ್ ಮಳೆಗಾಲದಲ್ಲಿ ಸೋರುವಿಕೆ ಸಹಿತ ಸಣ್ಣಪುಟ್ಟ ಲೋಪದೋಷಗಳು ಇದ್ದು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು
ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮನವಿ
ಇದೇ ಸಂದರ್ಭದಲ್ಲಿ ಕೆ ಎಸ್ ರಾವ್ ನಗರದ ಸಾರ್ವಜನಿಕರು ಹಾಗೂ ನಿಲ್ದಾಣದ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಮುಲ್ಕಿ ರೈಲ್ವೇ ನಿಲ್ದಾಣ ಸಂಪರ್ಕಿಸುವ ಕೆಂಚನಕೆರೆ ಹಾಗೂ ಕೆ ಎಸ್ ರಾವ್ ನಗರದ ರಸ್ತೆ ದುರಸ್ತಿಗೆ ಅಧ್ಯಕ್ಷರಾದ ಇಸುಕುಮಾರ್ ರವರು ಸಂಸದರಿಗೆ ಮನವಿ ನೀಡಿದರು.
ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಸಂಸದರು ತಿಳಿಸಿದರು
ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ನಾಯಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಭುವನಾಭಿರಾಮ ಉಡುಪ, ದಿನೇಶ್ ಪುತ್ರನ್, ಈಶ್ವರ ಕಟೀಲು, ಸತೀಶ್ ಅಂಚನ್, ರಂಗನಾಥ ಶೆಟ್ಟಿ, ನವೀನ್ ರಾಜ್,ಜೀವನ್ ಶೆಟ್ಟಿ ಅಂಗರಗುಡ್ಡೆ,ಲಕ್ಷ್ಮಣ್ ಸಾಲ್ಯಾನ್, ಶೈಲೇಶ್ ಕುಮಾರ್, ವಿಠಲ್ ಎನ್ ಎಂ, ದೇವಪ್ರಸಾದ್ ಕೆಂಪುಗುಡ್ಡೆ, ಅಶೋಕ್ ಜನನಿ, ಪ್ರಶಾಂತ್ ಕೆಎಸ್ ರಾವ್ ನಗರ, ರವೀಶ್ ಕಾಮತ್, ಸಾಧು ಅಂಚನ್ ಮಟ್ಟು,
ಕೊಂಕಣ ರೈಲ್ವೇ ಅಧಿಕಾರಿಗಳಾದ ಗಜಾನನ ಬಂಟ್, ಗೋಪಾಲಕೃಷ್ಣ, ಬಿ ಎಂ ವೆಂಕಟೇಶ, ಕಮರ್ಷಿಯಲ್ ಸೂಪರ್ ವೈಸರ್ ಸತೀಶ್ ಹೆಗ್ಡೆ,ಮುಲ್ಕಿ ರೈಲ್ವೇ ನಿಲ್ದಾಣದ
ಸ್ಟೇಷನ್ ಮಾಸ್ಟರ್ ಕಬೀರ್ ಮತ್ತಿತರರು ಉಪಸ್ಥಿತರಿದ್ದರು.