ಮುಕ್ಕ ಪ್ರೊಟೀನ್ಸ್ ಕಂಪೆನಿ ಲಿ. ವತಿಯಿಂದ ವಿದ್ಯಾರ್ಥಿ ವೇತನ, ಶಿಕ್ಷಣ ಪರಿಕರ ವಿತರಣೆ
ಹಳೆಯಂಗಡಿ : ಪ್ರತಿಷ್ಠಿತ ಮುಕ್ಕ ಪ್ರೊಟೀನ್ಸ್ ಲಿ. ವತಿಯಿಂದ ಸಸಿಹಿತ್ಲು ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸಹಯೋಗದಲ್ಲಿ ಸಾಮಾಜಿಕ ಬದ್ಧತೆ (ಎಸ್‌ಆರ್) ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ ಕದಿಕೆ ಬಬ್ಬರ್ಯ ದೈವಸ್ಥಾನದ ಕದಿಕೆ ಮೊಗವೀರ ಸಭಾದ ಸಭಾಭವನದಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮುಕ್ಕ ಪ್ರೊಟೀನ್ಸ್ ಕಂಪೆನಿ ನಿರ್ದೇಶಕ ಮಹಮ್ಮದ್ ಹಾಸಿರ್, ಮಹಮ್ಮದ್ ಅಯಾನ್, ಮಹಮ್ಮದ್ ರಾಯಿಫ್, ನಿವೃತ್ತ ಪ್ರಾಧ್ಯಾಪಕ ವಾಮನ್ ಇಡ್ಯಾ, ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ಸಂತೋಷ್ ಕುಮಾರ್, ಮುಕ್ಕ ಪ್ರೊಟೀನ್ಸ್ ಕಂಪೆನಿಯ ಎಕ್ಸ್‌ಪೋರ್ಟ್ ಇಂಪೋರ್ಟ್ ಸೀನಿಯರ್ ಮ್ಯಾನೇಜರ್ ರೂಪೇಶ್, ಮ್ಯಾನೇಜರ್ ಜಗನ್ನಾಥ ಕೋಟ್ಯಾನ್, ಮುಖ್ಯೋಪಾಧ್ಯಾಯಿನಿ ಸ್ಫೂರ್ತಿ, ವಿನೋದ್ ಕುಮಾರ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.