Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಬೆನ್ನೆಲುಬು- ಬಿ ರಮಾನಾಥ ರೈ

ಕಿನ್ನಿಗೋಳಿ :ಕಾಂಗ್ರೆಸ್ ಪಕ್ಷವನ್ನು ಅಂದಿನಿಂದಲೂ ಇಂದಿನವರೆಗೆ ಬೆಳೆಸಿ ,ರಕ್ಷಿಸಿದ ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಕಾರ್ಯಕರ್ತರು ಪಕ್ಷಕ್ಕೆ ನೀಡಿದ ಸೇವೆಯನ್ನು ಪಕ್ಷ ಎಂದೂ ಮರೆಯುವುದಿಲ್ಲ. ಸಂವಿಧಾನದ ಕೊಲೆ ಮಾಡುತ್ತಿರುವ ರಾಷ್ಟ್ರದೋಹಿಗಳನ್ನು ಕಾಂಗ್ರೆಸ್ ಪಕ್ಷ ಎಂದು ಸಹಿಸುವುದಿಲ್ಲ. ಇದಕ್ಕಾಗಿ ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜೀ ಸಚಿವ ರಮಾನಾಥ ರೈ ಹೇಳಿದರು
ಅವರು ಕಿನ್ನಿಗೋಳಿ ಸರಾಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಬಿ ಎಲ್ ಎ ಗಳ ಕಾರ್ಯಗಾರ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಮಾಜೀ ಸಚಿವ  ಕೆ ಅಭಯ್ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು..
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ  ರವರು ಎಸ್ ಐ ಆರ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ತರಬೇತುದಾರರಾದ  ಅಮಿತಾ ತರಬೇತಿ ಕಾರ್ಯಕ್ರಮ ನಿರ್ವಹಿಸಿದರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಪದ್ಮರಾಜ್ ಎಸ್, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ,ಕೆಪಿಸಿಸಿ ಸದಸ್ಯರುಗಳಾದ ಎಚ್ ವಸಂತ ಬರ್ನಾಡ್ ಮತ್ತು ಚಂದ್ರಹಾಸ ಸನಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿಲ್ಮಾ ಡಿಕೋಸ್ಟ ಮತ್ತು ಸುಪ್ರಿಯ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ರಕ್ಷಿತ್ ಪೂಜಾರಿ ಮತ್ತು ಅನೀಶ್ ಡಿಸೋಜಾ, ಕಿನ್ನಿಗೋಳಿ ಪ್ರಜಾಪ್ರತಿನಿಧಿ ಅಧ್ಯಕ್ಷ ಪ್ರಮೋದ್ ಕುಮಾರ್,ಪುರಂದರ ದೇವಾಡಿಗ ಮೂಡಬಿದ್ರೆ, ಮತ್ತಿತರರು ಉಪಸ್ಥಿತರಿದ್ದರು 
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು . ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸರ್ಫ್ರಾಜ್ ಬಾಳ ಧನ್ಯವಾದ ಅರ್ಪಿಸಿದರು 
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು..