ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಶ್ರೀಮತಿ ಅಮೂಲ್ಯ ಯು. ಶೆಟ್ಟಿ ಆಯ್ಕೆ
ಕಿನ್ನಿಗೋಳಿ:ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ ಇದರ 2026 - 27ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಅಮೂಲ್ಯ ಯು. ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ಶರತ್ ಶೆಟ್ಟಿ ಖಜಾಂಚಿಯಾಗಿ ಶ್ರೀಮತಿ ಅಂಬಿಕಾ ಪ್ರತಾಪ್ ಶೆಟ್ಟಿ, ಐಎಸ್ಒ ಆಗಿ ಲತಾ ಕೃಷ್ಣ
ಸಂಪಾದಕರಾಗಿ ಶ್ರೀಮತಿ ರಾಧಾ ಶೆಣೈ ಆಯ್ಕೆ ಯಾಗಿದ್ದಾರೆ. ಪದಗ್ರಹಣ ಸಮಾರಂಭವು ಇದೇ ಬರುವ ತಾರೀಕು ಜುಲೈ 12ರಂದು ಕಿನ್ನಿಗೋಳಿಯ ಹೋಟೆಲ್ ಸ್ವಾಗತ್ ನ ಗುರುಪ್ರಸಾದ್ ಬಿಲ್ಡಿಂಗ್ ನಲ್ಲಿ ಸಂಜೆ 6.00 ಕ್ಕೆ ನಡೆಯಲಿದೆ.