ವಿಶ್ವಕರ್ಮ ಸಮಾಜಸೇವಾ ಸಂಘ (ರಿ) ಕಿನ್ನಿಗೋಳಿ , ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಭಜನಾ ಮಂಗಲೋತ್ಸವ
ಕಿನ್ನಿಗೋಳಿ: ವಿಶ್ವಕರ್ಮ ಸಮಾಜಸೇವಾ ಸಂಘ (ರಿ) ಕಿನ್ನಿಗೋಳಿ ಇಲ್ಲಿನ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಭಜನಾ ಮಂಗಲೋತ್ಸವ ಭಾನುವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಣ್ಣಯ್ಯಾಚಾರ್ಯ ಸಭಾಭವನ ಕಿನ್ನಿಗೋಳಿಯಲ್ಲಿ ನಡೆಯಿತು, ಮಂಗಲೋತ್ಸವದ ದೀಪ ಪ್ರಜ್ವಲನೆಯನ್ನು ಶ್ರೀ ಕ್ಷೇತ್ರ ಪುನರೂರಿನ ಆಡಳಿತ ಮೊಕ್ತೇಸರ ವಾಸುದೇವ ರಾವ್ ಪುನರೂರು ನೆರವೇರಿಸಿದರು. ಈ ಸಂದರ್ಭ ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು, ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಆಚಾರ್ಯ ಸುರಗಿರಿ, ಸಭಾಭವನ ಸಮಿತಿಯ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಶ್ರೀ ಕಾಳಿಕಾಂಭ ಮಹಿಳಾ ವೃಂದದ ಅಧ್ಯಕ್ಷೆ ಅನಿತಾ ಪ್ರಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.