Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿದ್ಯಾರ್ಥಿಗಳು ಉತ್ತಮ‌ಶಿಕ್ಷಣ ಪಡೆದು ಭವಿಷ್ಯರೂಪಿಸಿಕೊಳ್ಳಿ - ಪೃಥ್ವಿರಾಜ್ ಆಚಾರ್ಯ

ಕಿನ್ನಿಗೋಳಿ:ವಿದ್ಯಾರ್ಥಿಗಳು ಉತ್ತಮ‌ಶಿಕ್ಷಣ ಪಡೆದು ತಮ್ಮ‌ಭವಿಷ್ಯವನ್ನು ರೂಪಿಸಿ, ಸಮಾಜದಲ್ಲಿ ಉತ್ತಮ‌ ಪ್ರಜೆಯಾಗಿ ಬಾಳಬೇಕು ಎಂದು ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪದ್ಮನೂರು  ಇಲ್ಲಿನ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು‌ ಶಿಕ್ಷಣಕ್ಕೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಿ ಮಾತನಾಡಿದರು.  ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ ಸರಕಾರಿ ಶಾಲೆಯಲ್ಲಿ ಕಲಿತವರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿ‌ ಪ್ರಥ್ವಿರಾಜ ಆಚಾರ್ಯ ಅವರ ವತಿಯಿಂದ ಶಾಲೆಗೆ ಕುಡಿಯುವ ನೀರು ಶುದ್ದೀಕರಣ ಯಂತ್ರ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.  ಈ ವೇಳೆ ರಾಜ್ಯಕ್ಕೆ 7 ನೇ ರಾಂಕ್ ಪಡೆದ ಅನ್ಯ ಆಚಾರ್ಯ ಅವರನ್ನು‌ ಸನ್ಮಾನಿಸಲಾಯಿತು.
 ಈ ಸಂದರ್ಭ  ಅನಿತಾ ಪ್ರಥ್ವಿರಾಜ್ ಆಚಾರ್ಯ, ಅನ್ಯ, ಅನ್ವಯ್, ಜೊಸೆಪ್ ಕ್ವಾರ್ಡಸ್, ಹೆರಿಕ್ ಪಾಯಸ್, 
ಸುರೇಶ್ ಪದ್ಮನ್ನೂರು,  ಜಗದೀಶ್ ಆಚಾರ್ಯ, ಪ್ರಕಾಶ್ ಡಿಸೋಜ,  ಎಸ್.ಡಿ.ಎಂ‌ ಸಿ  ಅಧ್ಯಕ್ಷ ಶೇಖರ ಪೂಜಾರಿ, ಪವಿತ್ರ ಹಾಗೂ  ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪದ್ಯಯನಿ ಐರಿನ್ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಅಶಾಲತಾ ಧನ್ಯವಾದವಿತ್ತರು.
ಶಿಕ್ಷಕಿ ಪ್ರಜ್ವಲ್ ಕಾರ್ಯಕ್ರಮ‌ ನಿರೂಪಿಸಿದರು.