Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ: ತುಡಮ್ ಪರಿಸರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಬಗ್ಗೆ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜೂನ್ 1 ರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಈಗಾಗಲೇ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿರುವುದರಿಂದ  ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಈ ಬಗ್ಗೆ ಕಿನ್ನಿಗೋಳಿ ಕೊಸೆಸಂವ್ ಅಮ್ಮನವರ ದೇವಾಲಯದ ಸಾಂ. ತೆರೆಜಾ ವಾರ್ಡ್ ನ ಸದಸ್ಯರು  ಕಿನ್ನಿಗೋಳಿ ತುಡಮ್ ಪರಿಸರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಬಗ್ಗೆ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವನ್ನು ಮಾಡುವ ಮೂಲಕ ರಸ್ತೆ ಇಕ್ಕೆಲಗಳಲ್ಲಿ ಎರಡು ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ತೆರವುಗೊಳಿಸಿ, ಸಾರ್ವಜನಿಕರು ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿಲು ಕರೆ ನೀಡಿದರು.  ನಮ್ಮ ಬದುಕು ಸಾಗಿಸಲು ಪರಿಸರ ಸ್ವಚ್ಛತೆ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿ,ನೈಸರ್ಗಿಕ ಹಾಗೂ ಬಟ್ಟೆ ಚೀಲ ಉಪಯೋಗ ಮಾಡುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಬಗ್ಗೆ ಜಾಗೃತಿ ಮೂಡಿಸಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭ  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ  ಪ್ರಣೀಕ್, ಸಾಮಾಜಿಕ ಕಾರ್ಯಕರ್ತರ ಸ್ಟ್ಯಾನಿ ಪಿಂಟೋ, ತೆರೆಜಾ ವಾರ್ಡ್ ಗುರಿಕಾರ  ಗ್ರೇಟ್ಟಾ ಫೆರ್ನಾಂಡಿಸ್ ಹಾಗೂ  ಪ್ರತಿನಿಧಿ ಸದಸ್ಯರುಗಳು  ಹಾಜರಿದ್ದರು