Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅತ್ತೂರು ಹಾಲು ಉತ್ಪಾದಕರ ಸಹಕಾರ ಸಂಘ ದ 2025 - 26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

ಕಿನ್ನಿಗೋಳಿ:ಅತ್ತೂರು ಹಾಲು ಉತ್ಪಾದಕರ ಸಹಕಾರ ಸಂಘ ದ   2025 - 26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು   ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ರಾಜಗೋಪುರದಲ್ಲಿ ನಡೆಯಿತು. ಈ ಸಂದರ್ಭ ಕಳೆದ 20 ವರ್ಷಗಳಿಂದ ಕಾರ್ಯದರ್ಶಿಯಾಗಿ ನಿವೃತ್ತರಾದ ಪ್ರಸನ್ನ ಎಲ್ ಶೆಟ್ಟಿ ಅತ್ತೂರುಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ಸಂಘದ ನಿರ್ದೇಶಕರ ಸದಸ್ಯರ ಸಹಕಾರದಿಂದ ನಮ್ಮ ಸಂಘ ಬೆಳೆಯಲು ಸಾಧ್ಯವಾಗಿದೆ. ಜನರ ಸಹಕಾರದಿಂದ  ಕಳೆದ 20 ವರ್ಷಗಳಲ್ಲಿ ಸಂಘದಲ್ಲಿ ಕಾರ್ಯನಿರ್ವಹಿಸಿದ್ದು, ಸದಸ್ಯರು ಇನ್ನಷ್ಟು ಪಶುಗಳನ್ನು ಸಾಕಿ ಸಲಹಿ ಸಂಘದ ಅಭಿವೃದ್ದಿಗೆ ಕೈಜೋಡಿಸಿ ಎಂದರು. 
 ಪಶು ವೈದ್ಯಕೀಯ ಪ್ರಥಮ‌ ಚಿಕಿತ್ಸಾ ಅಧಿಕಾರಿ ರಾಜೇಶ್ ಶೆಟ್ಟಿ ಉಳೆಪಾಡಿ ಪಶುಪಾಲನೆ ಮತ್ತು ಸರಕಾರದ ಬಗ್ಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. 
ಈ ಸಂದರ್ಭ ಸುರಗಿರಿ ದೇವಳದ ಮೊಕ್ತೇಸರ  ಜಗನ್ನಾಥ ಶೆಟ್ಟಿ ಮಮ್ಮೆಟ್ಟು,  ರಮಾನಾಥ ಶೆಟ್ಟಿ ಅಮಿತಾ ನಿವಾಸ, ಸಂಘದ ಅಧ್ಯಕ್ಷ ವಿಜಯ ಎಲ್ ಕೋಟ್ಯಾನ್, ನಿರ್ದೇಶಕರಾದ ಚಂದ್ರಹಾಸ ಶೆಟ್ಟಿ, ತಿಮ್ಮಪ್ಪ ಶೆಟ್ಟಿ, ಮನೋಹರಿ ಶೆಟ್ಟಿ, ದಯಾವತಿ, ಮಹಾಬಲ ಶೆಟ್ಟಿ, ಲೀಲಾವತಿ ಶೆಟ್ಟಿ, ಜಗನ್ನಾಥ ಶೆಟ್ಟಿ, ಪುಷ್ಪಾವತಿ ಜೆ ಬಂಗೇರ, ಶಿವರಾಮ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತಿ ಶೆಟ್ಟಿ ಹಾಗೂ  ಮತ್ತಿತರರು ಉಪಸ್ಥಿತರಿದ್ದರು.