Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿಶ್ವ ಪರಿಸರ ದಿನ ,ಶಾಸಕ ಡಾ.ಭರತ್ ಶೆಟ್ಟಿಯವರಿಂದ ಗಿಡವನ್ನು ನೆಡುವ ಮೂಲಕ ಚಾಲನೆ

ಕಾವೂರು:ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗಾಗಿ ನಾಗರಿಕರಿಗೆ ಸಸಿಗಳನ್ನು ನೆಡುವಂತೆ ಕರೆ ನೀಡಿದ್ದಾರೆ. ಅವರು ಪರಿಸರಸ್ನೇಹಿ ಜೀವನಶೈಲಿಗಾಗಿ 'ಮಿಷನ್ ಲೈಫ್'  ಅಭಿಯಾನವನ್ನು ಉತ್ತೇಜಿಸುವುದಲ್ಲದೆ, 'ಏಕ್ ಪೇಡ್ ಮಾ ಕೆ ನಾಮ್' (Ek Ped Maa Ke Naam) ಹೆಸರಿನಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ಸಸಿಗಳನ್ನು ನೆಡುವ ವಿಶೇಷ ಅಭಿಯಾನದ ಪ್ರಯುಕ್ತ ಶುಕ್ರವಾರ  ಕಾವೂರು 15ನೇ ವಾರ್ಡಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದ  ಶಾಸಕ  ಡಾ.ವೈ ಭರತ್ ಶೆಟ್ಟಿ ಅವರು ಗಿಡವನ್ನು ನೆಡುವ ಮೂಲಕ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ರಂದೀಪ್ ಕಾಂಚನ್, ಕಾವೂರು ಮಹಾ ಶಕ್ತಿಕೇಂದ್ರ ಅಧ್ಯಕ್ಷ  ಸಿತೇಶ್ ಕೊಂಡೆ, ಕಾವೂರು ವಾರ್ಡ್ ಅಧ್ಯಕ್ಷ ಅಜಿತ್ ಕಾವೂರು, ಬೂತ್ ಅಧ್ಯಕ್ಷ ವಿನೋದ್,ಕಾರ್ಯದರ್ಶಿ ಚೇತನ್ ಕುಲಾಲ್,ಜಗದೀಶ್ ಮುರ, ಕಿರಣ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಶೇಖರ್ ಪೂಜಾರಿ, ಜಯರಾಜ್ ಶೆಟ್ಟಿ ಭಾಜಪ ಕಾರ್ಯಕರ್ತರು ಹಾಗೂ ಮೊದಲಾದವರು ಉಪಸ್ಥಿತಿದ್ದರು.