Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕವತ್ತಾರು: ಡಾ.ಅಂಬೇಡ್ಕರ್ ರವರ ಆದರ್ಶ ಜೀವನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಮುಲ್ಕಿ: ಕವತ್ತಾರು ಗೌತಮಬುದ್ಧ ನಗರ .
ಅಂಬೇಡ್ಕರ್ ಭವನ ಸಮಿತಿ   ವತಿಯಿಂದ ಕವತ್ತಾರು ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗೆ ಸನ್ಮಾನ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. 
ಭವನ ಸಮಿತಿಯ ಅಧ್ಯಕ್ಷ  ಭಾಸ್ಕರ್  ರವರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದರು.
ಸಮುದಾಯದ ಹಿರಿಯರು, ಮಾರ್ಗದರ್ಶಕರು, ಹೋರಾಟಗಾರ ಶೇಖರ್ ಹೆಜ್ಮಾಡಿ, ಮಾತನಾಡಿ ಡಾ.ಅಂಬೇಡ್ಕರ್  ರವರ ಆದರ್ಶ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ಕರೆ ನೀಡಿದರು. 
ವೇದಿಕೆಯಲ್ಲಿ ಸುಧಾಕರ್ ನಂಬಿಯರ್. ಉಪಾಧ್ಯಕ್ಷ ರಾದ ಸಂದೀಪ್, ಗಂಗಾಧರ್
ಭವನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಸಂಘಟನಾ ಕಾರ್ಯದರ್ಶಿ ನಿತೇಶ್ ಸ್ವಾಗತಿಸಿದರು, ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.