ಕಟೀಲು ಮೇಳದ ಕಲಾವಿದರಿಂದ ತಾಳಮದ್ದಲೆ,ನಿವೃತ್ತ ಕಲಾವಿದರಿಗೆ ಗೌರವಾರ್ಪಣೆ
ಕಟೀಲು : ಯಕ್ಷಗಾನ ಕಲಾವಿದನಲ್ಲಿ ಮಾತಿನ ಕೌಶಲ್ಯವೂ ಹೆಚ್ಚಿದಾಗ ಆತನ ಪಾತ್ರವೂ ಗೆಲ್ಲುತ್ತದೆ. ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಹಾಗಾಗಿ ಕಟೀಲು ಮೇಳದ ಕಲಾವಿದರು ತಾಳಮದ್ದಳೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಕಟೀಲು ದೇಗುಲದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಹೇಳಿದರು.
ಅವರು ಕಟೀಲು ದೇಗುಲದಲ್ಲಿ ಕಟೀಲು ಯಕ್ಷಗಾನ ಮೇಳಗಳ ಆಸಕ್ತ ಕಲಾವಿದರಿಂದ ನಡೆಯುವ ತಾಳಮದ್ದಲೆ ಸಪ್ತಾಹದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಉದ್ಘಾಟಿಸಿದರು.
ಇದೇ ಸಂದರ್ಭ ಕಟೀಲು ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಾಯಾರು ರಘು ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಲಕ್ಷ್ಮಣ ಕೋಟ್ಯಾನ್ ಇವರನ್ನು ರೂಪಾಯಿ ಒಂದು ಲಕ್ಷ ನಗದಿನೊಂದಿಗೆ ಗೌರವಿಸಲಾಯಿತು.