Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ ಕೊಡೆತ್ತೂರು, ಪಶುಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆ ಕಿನ್ನಿಗೋಳಿ ಹಾಗೂ ಪಟ್ಟಣ ಪಂಚಾಯತಿ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

ಕಟೀಲು:ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ ಕೊಡೆತ್ತೂರು, ಪಶುಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆ ಕಿನ್ನಿಗೋಳಿ ಹಾಗೂ ಪಟ್ಟಣ ಪಂಚಾಯತಿ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವು  ಉಲ್ಲoಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಸನ್ನಿಧಾನದಲ್ಲಿ ಆದಿತ್ಯವಾರ ನಡೆಯಿತು.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ  ಗುರುರಾಜ್ ಮಲ್ಲಿಗೆಯoಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಪಶುವೈದ್ಯಾಧಿಕಾರಿ ಡಾ. ವಿಶ್ವರಾಧ್ಯ ರೇಬಿಸ್ ಲಸಿಕಾ ಬಗ್ಗೆ ಮಾಹಿತಿ ನೀಡಿದರು. ಜನನಿ  ಜನ ಸೇವಾ ಸಂಸ್ಥೆ ಉಲ್ಲಂಜೆಯ  ಅಧ್ಯಕ್ಷ ಹಾಗೂ  ಕಿನ್ನಿಗೋಳಿ  ಪಟ್ಟಣ ಪಂಚಾಯತ್ ಕೌನ್ಸಿಲರ್  ಪ್ರಕಾಶ್ ಕಿನ್ನಿ ಗೋಳಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು.
 ಶ್ರೀ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್  ಶೈಲೇಶ್ ಅಂಚನ್,  ಸಂತಾನ್ ಡಿಸೋಜ ಶ್ರೀಮತಿ ಕೋಕಿಲ ಡಿ ಅಮೀನ್ ಶ್ರೀಮತಿ  ಸುನಿತಾ ರೋಡ್ರಿಗಸ್, ಬರ್ಕೆ ಫ್ರೆಂಡ್ಸ್ ರಿ, ಕೊಡೆತ್ತೂರು ಅಧ್ಯಕ್ಷ  ಪ್ರೇಮ್ ರಾಜ್ ಶೆಟ್ಟಿ ಮಾಧವ ಪೂಜಾರಿ ಉಲ್ಲಂಜೆ ನಿತಿನ್ ಉಲ್ಲಂಜೆ ನವೀನ್ ಉಲ್ಲಂಜೆ ಮತ್ತಿತರರು ಉಪಸ್ಥಿತರಿದ್ದರು ಶರತ್ ಶೆಟ್ಟಿ ಕಿನ್ನಿಗೋಳಿ  ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಪ್ರಮೀಳಾಚಾರ್ಯ ಪ್ರಾರ್ಥಿಸಿದರು ಕಾರ್ಯಕ್ರಮ ಸಂಘಟಕ  ಪ್ರಕಾಶ್ ಕಿನ್ನಿಗೋಳಿಧನ್ಯವಾದವಿತ್ತರು.ಸುಮಾರು 132 ಶ್ವಾನಗಳಿಗೆ 42 ಬೆಕ್ಕುಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.