ಕಟೀಲು ಕನ್ನಡ ಹಾಗೂ ಇಂಗ್ಲಿಷ್ ಪ್ರೌಢಶಾಲೆಗಳಲ್ಲಿ ಪ್ರಾರಂಭೋತ್ಸವ
ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಳ ಕನ್ನಡ ಹಾಗೂ ಇಂಗ್ಲಿಷ್ ಪ್ರೌಢಶಾಲೆಗಳ ಪ್ರಾರಂಭೋತ್ಸವದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ೮ನೇ ತರಗತಿಗೆ ದಾಖಲಾತಿಯನ್ನು ಪಡೆದುಕೊಂಡು ಆಗಮಿಸಿದ ವಿದ್ಯಾರ್ಥಿಗಳಿಗೆ ತಾವೇ ತಯಾರಿಸಿದ ಹೂಗುಚ್ಛವನ್ನು ನೀಡಿ, ಹಣೆಗೆ ತಿಲಕವನ್ನಿಟ್ಟು ಸ್ವಾಗತಿಸಿದರು.
ಕಟೀಲು ದೇಗುಲದ ಅರ್ಚಕ ಶ್ರೀಕರ ಆಸ್ರಣ್ಣ, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಕಟೀಲು ಸ್ಪೋರ್ಟ್ಸ್ ಅಂಡ್ ಗೇಮ್ಸ್ ಕ್ಲಬ್‌ನ ಕೇಶವ, ರಾಜಾರಾಮ್, ಕಟೀಲು ಸಮೂಹ ವಿದ್ಯಾ ಸಂಸ್ಥೆಯ ಸಂಯೋಜನಾಧಿಕಾರಿ ದಯಾನಂದ ಮಾಡ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿಥುನ್ ಉಡುಪ, ಉಪಪ್ರಾಚಾರ್ಯ ರಾಜಶೇಖರ್ ಎನ್., ಗಿರೀಶ್ ತಂತ್ರಿ, ಪುಂಡಲೀಕ ಕೊಠಾರಿ, ಶ್ರೀವತ್ಸ, ರೋಹಿಣಿ ಶೆಟ್ಟಿ ಮುಂತಾದವರಿದ್ದರು. ಕ್ಯಾಪ್ಸ್ ಫೌಂಡೇಶನ್ ವತಿಯಿಂದ ನೀಡಲಾದ ನೀರಿನ ಬಾಟಲಿ ಹಾಗೂ ಕೈಚೀಲವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.